ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ತಹಶೀಲ್ದಾರರಿಗೆ ಗೆರಾವ್ ಹಾಕಿದ ಗ್ರಾಮಸ್ಥರು

ಮಂಗಳೂರು: ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಮಂಗಳೂರು ತಹಶೀಲ್ದಾರರಿಗೆ ಗ್ರಾಮಸ್ಥರು ಗೆರಾವ್ ಹಾಕಿರುವ ಘಟನೆ ಮೂಡುಶೆಡ್ಡೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆದಿದೆ.

ಮಂಗಳೂರು ತಾಲೂಕಿನ ಮೂಡುಶೆಡ್ಡೆ, ಪಡುಶೆಡ್ಡೆ ಗ್ರಾಮಸ್ಥರಿಗಾಗಿ ಇಂದು ಮಂಗಳೂರು ತಹಶೀಲ್ದಾರರ ಗ್ರಾಮ ವಾಸ್ತವ್ಯ ಹೂಡಿದ್ದರು. ಈ ವೇಳೆ ಸ್ಥಳೀಯ ನಿವಾಸಿಗಳು ಹಕ್ಕು ಪತ್ರ ತಿದ್ದುಪಡಿ ಮಾಡಿಕೊಂಡುವಂತೆ ತಹಶೀಲ್ದಾರರಲ್ಲಿ ಮನವಿ ಮಾಡಿದ್ದರು. ಆದರೆ ಅವರು ಹಕ್ಕು ಪತ್ರ ತಿದ್ದುಪಡಿ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಪರಿಣಾಮ ಆಕ್ರೋಶಿತರಾದ ಗ್ರಾಮಸ್ಥರು ಗ್ರಾಮ ವಾಸ್ತವ್ಯವಿದ್ದ ಸ್ಥಳದಲ್ಲಿಯೇ ತಹಶಿಲ್ದಾರ್ ಗೆ ಗೆರಾವ್ ಹಾಕಿದ್ದಾರೆ. ಅಲ್ಲದೆ ಸಭಾಂಗಣದಿಂದ ಅಧಿಕಾರಿಗಳು ಹೊರ ಹೋಗದಂತೆ ಬೀಗ ಜಡಿದು ಗ್ರಾಮಸ್ಥರು ಸ್ಥಳದಲ್ಲಿಯೇ ಮಲಗಿದ್ದಾರೆ. ಬಳಿಕ ಶಾಸಕರು ನೀಡಿರುವ ಭರವಸೆಯ ಮೇರೆಗೆ ಅಧಿಕಾರಿಗಳನ್ನು ಗ್ರಾಮ ಜನತೆ ಬಿಟ್ಟಿದ್ದಾರೆ.

ಈ ಮೂಲಕ 15 ದಿನಗಳಲ್ಲಿ ಹಕ್ಕು ಪತ್ರ ತಿದ್ದುಪಡಿ ಮತ್ತು ಹೊಸ ಹಕ್ಕು ಪತ್ರ ವಿತರಣೆಯ ಭರವಸೆಯನ್ನು ಗ್ರಾಮಸ್ಥರಿಗೆ ನೀಡಲಾಗಿದೆ.

Edited By : Nagesh Gaonkar
Kshetra Samachara

Kshetra Samachara

18/06/2022 06:25 pm

Cinque Terre

10.42 K

Cinque Terre

0

ಸಂಬಂಧಿತ ಸುದ್ದಿ