ಮಂಗಳೂರು:ವಿಧಾನ ಪರಿಷತ್‌ನ ಭರವಸೆಗಳ ಸಮಿತಿಯ ತಂಡ ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸ ಕೈಗೊಂಡಿದೆ.ಮಂಗಳೂರು ನಗರದ ಉಳ್ಳಾಲ ಪ್ರದೇಶಗಳಿಗೆ ತೆರಳಿ ಕಡಲ್ಕೊರೆತ ತಡೆಗೋಡೆ ಪರಿಶೀಲನೆ, ಉಳ್ಳಾಲ ಒಳಚರಂಡಿ ವ್ಯವಸ್ಥೆ ಪರಿಶೀಲನೆ, ಕೋಟೆಪುರ STP ಘಟಕ ಪರಿಶೀಲನೆ ಹಾಗೂ ಸೋಮೇಶ್ವರ ಕಡಲ್ಕೊರೆತ ಬಗ್ಗೆ ವೀಕ್ಷಿಸಿ ಪರಿಶೀಲನೆ ನಡೆಸಿದ್ರು.
ಈ ಸಂದರ್ಭದಲ್ಲಿ ಭರವಸೆ ಸಮಿತಿಯ ಅಧ್ಯಕ್ಷರಾದ ಬಿ.ಎಂ.ಫಾರೂಕ್, ಸದಸ್ಯರುಗಳಾದ ಶಶೀಲ್ ಜಿ ನಮೋಶಿ, ಕೆ.ಟಿ ಶ್ರೀಕಂಟೇಗೌಡ, ಯು.ಬಿ ವೆಂಕಟೇಶ್, ರುದ್ರೇಗೌಡ, ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ, ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಡಾ.ಕುಮಾರ್ ಸೇರಿದಂತೆ ಇತರೆ ಸಂಬಂಧಿಸಿದ ಅಧಿಕಾರಿಗಳು ಉಪಸ್ಥಿತರಿದ್ದರು.
Kshetra Samachara
05/05/2022 06:31 pm