ಉಡುಪಿ: ಸರಕಾರವು ದೇವಸ್ಥಾನ, ಮಠ-ಮಂದಿರಗಳಿಗೆ ನೀಡುವ ಅನುದಾನ ಶಾಸಕರು, ಮಂತ್ರಿಗಳಿಗೆ ಹೋಗುವುದಿಲ್ಲ. ಯಾವುದೋ ಪ್ರಲೋಭನೆಗೆ ಒಳಗಾಗಿ ತಪ್ಪು ಹೇಳಿಕೆ ನೀಡುವುದು ಸರಿಯಲ್ಲ ಎಂದು ಉಡುಪಿಯ ಪಲಿಮಾರು ಮಠಾಧೀಶರು ಹೇಳಿದ್ದಾರೆ.
ದಿಂಗಾಲೇಶ್ವರ ಶ್ರೀಗಳು ,ಮಠಗಳಿಗೆ ಪಡೆಯುವ ಅನುದಾನಕ್ಕೂ ಕಮಿಷನ್ ಕೊಡಬೇಕಾಗುತ್ತದೆ ಎಂದು ಆರೋಪ ಮಾಡುವ ಮೂಲಕ ರಾಜ್ಯದಲ್ಲಿ ಸಂಚಲನ ಉಂಟು ಮಾಡಿದ್ದರು.ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿರುವ ಶ್ರೀಗಳು , ಸರಕಾರ ಮಠ-ಮಂದಿರಕ್ಕೆ ನೀಡುವ ಅನುದಾನದಲ್ಲಿ ಅಪಸ್ವರ ಕೇಳಿ ಬರುತ್ತಿದೆ. ಅದು ಅವರ ಸ್ವರ ಆಗಿರಲಿಕ್ಕಿಲ್ಲ. ಅದರಲ್ಲಿ ಬೇರೆ ಯಾವುದೋ ಕಾರಣ ಇರಬಹುದು. ಸರಕಾರದ ಪ್ರಾಮಾಣಿಕ ಸೇವೆಯನ್ನು ಜನ ಗುರುತಿಸಬೇಕು. ಇದರಲ್ಲಿ ಹುಳಿ ಹಿಂಡುವ ಕಾರ್ಯ ಯಾರೂ ಮಾಡಬಾರದು ಎಂದು ದಿಂಗಾಲೇಶ್ವರ ಶ್ರೀಗಳಿಗೆ ತಿರುಗೇಟು ನೀಡಿದ್ದಾರೆ.
======
PublicNext
19/04/2022 02:04 pm