ರಾಷ್ಟ್ರ ಲಾಂಛನಕ್ಕೆ ಸಂಬಂಧಿಸಿದಂತೆ ಪರ ವಿರೋಧ ಚರ್ಚೆಗಳು ನಡೆಯುತ್ತಿವೆ. ಉಡುಪಿಯಲ್ಲಿ ಮುಖ್ಯಮಂತ್ರಿಗಳ ಜೊತೆ ಪತ್ರಕರ್ತರು ಈ ಬಗ್ಗೆ ಪ್ರಶ್ನಿಸಿದಾಗ ನಮ್ಮದು ಘರ್ಜಿಸುವ ಸಿಂಹ, ಕಾಂಗ್ರೆಸ್ ನದ್ದು ಮಲಗಿದ ಸಿಂಹ ಎಂದು ಸಿಎಂ ಲೇವಡಿ ಮಾಡಿದ್ದಾರೆ.
ರಾಷ್ಟ್ರ ಲಾಂಛನಕ್ಕೆ ಸಂಬಂಧಿಸಿದಂತೆ ಅಶೋಕನ ಸಾರನಾಥದಲ್ಲಿ ಇರುವಂತೆ ಯಥಾವತ್ತು ಮಾಡಲಾಗಿದೆ. ಕಾಂಗ್ರೆಸ್ ನೋಡುವ ದೃಷ್ಟಿ ಬೇರೆ, ನಾವು ನೋಡುವ ದೃಷ್ಟಿ ಬೇರೆ. ಕಾಂಗ್ರೆಸ್ ಇದರಲ್ಲೂ ರಾಜಕೀಯ ಹುಡುಕುತ್ತಿದೆ. ಸಿಂಹ ಹೇಗೆ ಸಶಕ್ತವಾಗಿ ಘರ್ಜನಾ ರೂಪದಲ್ಲಿರಬೇಕೋ ಅದು ನಮ್ಮ ಸಿಂಹ. ಕಾಂಗ್ರೆಸ್ ನಿದ್ದೆ ಮಾಡುವ ಸಿಂಹವನ್ನು ನಂಬಿಕೊಂಡು ಬಂದಿದೆ. ಕಾಂಗ್ರೆಸ್ ನ ಸಂಸ್ಕೃತಿ ಹೇಗೋ ಈ ಸಿಂಹ ಹಾಗೆಯೇ ಕಾಣುತ್ತಿತ್ತು. ನಮ್ಮದು ಘರ್ಜಿಸುವ ಸಿಂಹ, ಅವರದ್ದು ನಿದ್ದೆ ಮಾಡುವ ಸಿಂಹ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವ್ಯಂಗ್ಯವಾಡಿದರು.
ಸಂಸತ್ ಮುಂದಿನ ರಾಷ್ಟ್ರ ಲಾಂಛನದ ಬಗ್ಗೆ ಚರ್ಚೆ ವಿರೋಧ ಸಂಬಂಧ ಲಾಂಛನದ ಬಗ್ಗೆ ಈಗಾಗಲೇ ಸ್ಪಷ್ಟತೆ ಕೊಡಲಾಗಿದೆ. ಆ ಲಾಂಛನದಿಂದಲೇ ಸಿಂಹದ ಮುಖಚರ್ಯೆ ತೆಗೆದುಕೊಳ್ಳಲಾಗಿದೆ. ಲಾಂಛನವನ್ನು ನಾವು ನೋಡುವ ದೃಷ್ಟಿಯಲ್ಲಿದೆ. ವಿರೋಧ ಪಕ್ಷ ಮೊಸರಲ್ಲಿ ಕಲ್ಲು ಹುಡುಕುತ್ತಿದೆ. ನಮ್ಮಲ್ಲಿ ಕ್ರಿಯಾಶೀಲ, ಆಕ್ಟಿವ್ ಪ್ರಧಾನಿ ಇದ್ದಾರೆ ಎಂದು ಹೇಳಿದರು.
PublicNext
13/07/2022 03:41 pm