ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಅಭಿವೃದ್ಧಿ ಪ್ರಾಧಿಕಾರದಲ್ಲಿ ತಾರತಮ್ಯ ಬೇಡ: ಯುಟಿ ಖಾದರ್

ಮಂಗಳೂರು: ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮರಾಠ ಅಭಿವೃದ್ಧಿ ಪ್ರಾಧಿಕಾರ ರಚಿಸಲು ಹೊರಟಿರುವುದಕ್ಕೆ ನನ್ನ ವಿರೋಧವೇನು ಇಲ್ಲ, ಆದರೆ ಅದೇ ರೀತಿ ಬಿಲ್ಲವ, ಬಂಟ, ಕೊಟ್ಟರಿ, ಕುಲಾಲ, ಗಟ್ಟಿ ಮೊದಲಾದ ಸಮಾಜಕ್ಕೂ ಅಭಿವೃದ್ಧಿ ನಿಗಮಗಳ ಸ್ಥಾಪನೆಯಾಗಲಿ ಎಂದು ಶಾಸಕ ಯುಟಿ ಖಾದರ್ ಆಗ್ರಹಿಸಿದ್ದಾರೆ.

ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಇನ್ನಿತರ ಪಕ್ಷಗಳಿಗೆ ಓಲೈಕೆ ರಾಜಕಾರಣ ಕುರಿತು ಮಾತನಾಡುತ್ತದೆ. ಆದರೆ ಬಿಜೆಪಿ ಮಾಡುತ್ತಿರುವುದು ಏನು? ಬೈ ಎಲೆಕ್ಷನ್ ಬಂದಾಗ ಪ್ರಾಧಿಕಾರ ರಚಿಸೋದು ವೋಟ್ ಬ್ಯಾಂಕ್ ರಾಜಕಾರಣ ಅಲ್ವೇ ಅಂತಾ ಪ್ರಶ್ನಿಸಿದ್ರು. ಇದರ ಹಿಂದೆ ರಾಜಕೀಯ ಲಾಭ ಹೊರತು ಸಮುದಾಯದ ಬಗೆಗಿನ ಕಾಳಜಿ ಏನೂ ಇಲ್ಲ ಎಂದರು. ಅಲ್ಲದೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಲವು ಸಮುದಾಯಗಳಿದ್ದು ಆರ್ಥಿಕತೆಯಲ್ಲಿ ನಮಗೂ ಪಾಲಿರಲಿ. ಅದಕ್ಕಾಗಿ ಬೈ ಎಲೆಕ್ಷನ್ ತನಕ ಕಾಯೋದು ಬೇಕಿಲ್ಲ ಎಂದು ಕುಟುಕಿದರು.

Edited By : Manjunath H D
Kshetra Samachara

Kshetra Samachara

18/11/2020 02:13 pm

Cinque Terre

18.28 K

Cinque Terre

2

ಸಂಬಂಧಿತ ಸುದ್ದಿ