ಉಡುಪಿ: ಡಿಸೆಂಬರ್ ತಿಂಗಳಲ್ಲಿ ಗ್ರಾಪಂ ಚುನಾವಣೆ ನಡೆಯಲಿವೆ. ಈ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಚುನಾವಣಾಪೂರ್ವ ಪ್ರಕ್ರಿಯೆ ಬಿರುಸಿನಿಂದ ನಡೆಯುತ್ತಿವೆ. ರಜತಾದ್ರಿಯಲ್ಲಿ ಚುನಾವಣಾ ವಿಭಾಗದ ಅಧಿಕಾರಿಗಳು, ಸಿಬ್ಬಂದಿಗಳು ಲೋಕಲ್ ಫೈಟ್ ಗೆ ಸಂಬಂಧಿಸಿದಂತೆ ಪೂರ್ವಸಿದ್ಧತೆ ಆರಂಭಿಸಿದ್ದಾರೆ. ಜಿಲ್ಲೆಯ ಐದು ವಿಧಾನಸಭೆ ಕ್ಷೇತ್ರಗಳಿಗೆ ಚುನಾವಣಾ ಪರಿಕರ, ದಾಖಲೆ ರವಾನೆ ಮಾಡುತ್ತಿದ್ದಾರೆ. ಅಭ್ಯರ್ಥಿಗಳ , ಮತದಾರರ ಗುರುತು ಚೀಟಿ, ಬ್ಯಾಲೆಟ್ ಪೇಪರ್ ಗಳನ್ನು ಆಯಾ ತಾಲೂಕುಗಳಿಗೆ ಸಿಬ್ಬಂದಿ ರವಾನಿಸುತ್ತಿದ್ದಾರೆ. ಚುನಾವಣಾ ದಿನಾಂಕ ಇನ್ನಷ್ಟೇ ಆಯೋಗದ ಮೂಲಕ ಘೋಷಣೆ ಆಗಬೇಕಿದೆ.
Kshetra Samachara
05/11/2020 02:12 pm