ಉಡುಪಿ: ಶಿರಾ ಉಪಚುನಾವಣೆ ವಿಚಾರವಾಗಿ ಉಡುಪಿಯಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡ,ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ , ಕಾಂಗ್ರೆಸ್ ನಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ.ಭಿನ್ನಾಭಿಪ್ರಾಯ ಇರೋದು ಬಿಜೆಪಿ ಪಕ್ಷದಲ್ಲಿ. ಶಿರಾದಲ್ಲಿ ಭಾರತೀಯ ಜನತಾ ಪಾರ್ಟಿಗೆ ಅಭ್ಯರ್ಥಿಯೇ ಇರಲಿಲ್ಲ.ಕಾಂಗ್ರೆಸ್ ಪಕ್ಷಕ್ಕೆ ಅರ್ಜಿ ಸಲ್ಲಿಸಿದವರನ್ನು ಕರೆದುಕೊಂಡು ಹೋಗಿದ್ದಾರೆ ಎಂದರು.
ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಹರಿಪ್ರಸಾದ್ , ಬಿಜೆಪಿಯವರು ಯಡಿಯೂರಪ್ಪನವರನ್ನು ಶರಶಯ್ಯೆಯಲ್ಲಿ ಮಲಗಿಸಿದ್ದಾರೆ.
ಯಡಿಯೂರಪ್ಪ ಭೀಷ್ಮಾಚಾರ್ಯ ರಂತಾಗಿದ್ದಾರೆ. ಇಚ್ಛಾಮರಣ ಅವರಿಗೆ ಇರುತ್ತೆ.ಯಾವತ್ತು ಬೇಕಾದರೂ ಅಧಿಕಾರದಿಂದ ಹೋಗಬಹುದು.ಚುನಾವಣೆ ಮುಗಿದ ಬಳಿಕ ಅವರು ಅಧಿಕಾರದಿಂದ ಹೋಗುತ್ತಾರೆ ಎಂದು ಬಿ.ಕೆ. ಹರಿಪ್ರಸಾದ್ ಭವಿಷ್ಯ ನುಡಿದರು
Kshetra Samachara
15/10/2020 06:01 pm