ಪುತ್ತೂರು: 10ನೇ ತರಗತಿಯ ಈ ಹಿಂದಿನ ಸಮಾಜ ವಿಜ್ಞಾನ ಪಠ್ಯದಲ್ಲಿ ಶ್ರೀನಾರಾಯಣಗುರು ಧರ್ಮಪರಿಪಾಲನಾ ಯೋಗಂ ಶಿರೋನಾಮೆಯೊಂದಿಗೆ ಲೋಕಶಾಂತಿಯ 'ಹರಿಕಾರ, ಮಹಾನ್ ಮಾನವತಾವಾದಿ, ಬ್ರಹ್ಮಶ್ರೀ ನಾರಾಯಣಗುರುಗಳ ಜೀವನಚರಿತ್ರೆಯ ಪಾಠವನ್ನು ಮುದ್ರಿಸಲಾಗಿತ್ತು. ಇದನ್ನು ಈ ಬಾರಿ ಪಠ್ಯದಿಂದ ಕೈಬಿಟ್ಟರುವುದು ಖಂಡನೀಯ ಎಂದು ಪುತ್ತೂರು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘದ ಸತೀಶ್ ಕೆಡೆಂಜಿ ಹೇಳಿದರು.
ಈ ವರ್ಷದ ಪತಿಷ್ಠಿತ ಪಠ್ಯ ಪುಸ್ತಕದಲ್ಲಿ 19ನೇ ಶತಮಾನದಲ್ಲಿ ಕೇರಳದಲ್ಲಿ ಮೇಲ್ವರ್ಗದವರ ದಬ್ಬಾಳಿಕೆಯಿಂದಾಗಿ ಮತಾಂತರವಾಗುತ್ತಿದ್ದ ಹಿಂದುಳಿದ ವರ್ಗಗಳಿಗೆ, ಸ್ವರವಾಗಿ, ಶಕ್ತಿಯಾಗಿ ಅವರನ್ನು ಹಿಂದೂ ಧರ್ಮದಲ್ಲಿಯೇ ಉಳಿಸಿದ, ಕೇರಳವನ್ನು ದೇವರ ನಾಡನ್ನಾಗಿ ಪರಿವರ್ತಿಸಿದ, ಮಹಾನ್ ಸಂತ ವಿದ್ಯೆಯ ಮಹತ್ವವನ್ನು ಸಮಾಜಕ್ಕೆ ತಿಳಿಸಿದ ಪರಮಪೂಜ್ಯ ಬ್ರಹ್ಮಶ್ರೀ ನಾರಾಯಣ ಗುರುಗಳ ಜೀವನ ಚರಿತ್ರೆಯನ್ನು ಎಲ್ಲಾ ವಿದ್ಯಾರ್ಥಿಗಳು ಅಧ್ಯಯನ ಮಾಡಲೇ ಬೇಕು. ಆದ್ರೆ 10ನೇ ತರಗತಿಯ ಸಮಾಜವಿಜ್ಞಾನ ಪಠ್ಯ ಪುಸ್ತಕದಿಂದ ತೆಗೆದು ವಿದ್ಯಾರ್ಥಿಗಳಿಗೆ ಐಚ್ಛಿಕವಾದ 10ನೇ ತರಗತಿಯ ಕನ್ನಡ ಪಠ್ಯಪುಸ್ತಕದಲ್ಲಿ ಸೇರ್ಪಡೆಗೊಳಿಸಿ ಸಮಾಜದ ಕಣ್ಣೊರೆಸುವ ಸರ್ಕಾರದ ಈ ತಂತ್ರವನ್ನು ಯಾವತ್ತಿಗೂ ನಮ್ಮ ಸಮಾಜ ಒಪ್ಪುವುದಿಲ್ಲ.
ಸರಕಾರಕ್ಕೆ ನಾರಾಯಣಗುರುಗಳ ಬಗ್ಗೆ ಗೌರವವಿದ್ದರೆ 10ನೇ ತರಗತಿಯ ಸಮಾಜವಿಜ್ಞಾನ ಪುಸ್ತಕಕ್ಕೆ ಪೂರಕ ಪಠ್ಯವಾಗಿ ಈ ಹಿಂದೆ ಇದ್ದ ಪಾಠವನ್ನು ಪ್ರಕಟಿಸಬೇಕಾಗಿ ಈ ಮೂಲಕ ವಿನಂತಿಸುತ್ತೇವೆ. ಇಲ್ಲದಿದ್ದಲ್ಲಿ ನಮ್ಮ ಸಂಘದ ವತಿಯಿಂದ ಮುಂದಿನ ದಿನಗಳಲ್ಲಿ ಸೂಕ್ತ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
Kshetra Samachara
23/06/2022 12:47 pm