ಬಂಟ್ವಾಳ: ಆರ್.ಎಸ್.ಎಸ್. ಸಂಸ್ಥಾಪಕ ಕೇಶವ ಬಲಿರಾಮ ಹೆಡ್ಗೇವಾರ್ ಭಾಷಣ ಹಿಂಪಡೆಯಲು ಆಗ್ರಹಿಸಿ ಕ್ಯಾಂಪಸ್ ಪ್ರಂಟ್ ಆಫ್ ಇಂಡಿಯಾ ವತಿಯಿಂದ ಪ್ರತಿಭಟನೆ ಬಂಟ್ವಾಳದ ಕೈಕಂಬ ಜಂಕ್ಷನ್ ನಲ್ಲಿ ಅಡಿಯಲ್ಲಿ ಗುರುವಾರ ಸಂಜೆ ನಡೆಯಿತು.
ಸೇರ್ಪಡೆ ಮಾಡಿದ್ದು, ಶಿಕ್ಷಣದ ಕೇಸರೀಕರಣದ ಮುಂದುವರೆದ ಭಾಗವಾಗಿದ್ದು ಇದನ್ನು ಶೀಘ್ರ ಹಿಂಪಡೆಯಬೇಕೆಂದು ಬಂಟ್ವಾಳ ತಾಲೂಕು ಅಧ್ಯಕ್ಷ ಅಶ್ಫಾಖ್ ಹೇಳಿದರು. ರೋಹಿತ್ ಚಕ್ರತೀರ್ಥ ರಂತಹವರನ್ನು ಪರಿಷ್ಕರಣಾ ಸಮಿತಿಯ ಅಧ್ಯಕ್ಷರನ್ನಾಗಿ ಮಾಡಲಾಗಿದೆ. ವಿದ್ಯಾರ್ಥಿಗಳಿಗೆ ಸಂವಿಧಾನದ ಆಶಯಗಳನ್ನು ಅರಿತು ಸಮಾಜದಲ್ಲಿ ಸೌಹಾರ್ದತೆ, ಸಾಮರಸ್ಯಕ್ಕೆ ಒತ್ತು ಕೊಡುವ ನಿಟ್ಟಿನಲ್ಲಿ ಕಲಿಕೆ, ವಿದ್ಯೆಯನ್ನು ನೀಡಬೇಕು ಎಂದರು. ಭಾಷಣವನ್ನು ಶೀಘ್ರ ಪಠ್ಯಕ್ರಮದಿಂದ ಕೈ ಬಿಡಬೇಕು ಎಂದು ಕ್ಯಾಂಪಸ್ ಫ್ರಂಟ್ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಸಂಶುದ್ದೀನ್ ಪ್ರತಿಭಟನೆಯಲ್ಲಿ ಆಗ್ರಹಿಸಿದರು. ದ. ಕ ಜಿಲ್ಲಾ ನಾಯಕಿ ಸಹಲ ಮಾತನಾಡಿದರು.ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಬಂಟ್ವಾಳ ತಾಲೂಕು ಉಪಾಧ್ಯಕ್ಷ ಹಂದಾನ್, ಜೊತೆ ಕಾರ್ಯದರ್ಶಿ ರಿಫಾಯ್, ಕೋಶಾಧಿಕಾರಿ ಶಹೀಮ್ , ಸಮಿತಿ ಸದಸ್ಯರಾದ ನಜೀಬ್, ಅಜ್ವೀರ್, ಅರ್ಷದ್, ನಝೀಬ್ ಮೂಲರಪಟ್ಟಣ, ಝಮೀರ್ ,ಸಿನಾನ್ ಪ್ರತಿಭಟನೆಯಲ್ಲಿ ಇದ್ದರು.
Kshetra Samachara
26/05/2022 10:17 pm