ಉಡುಪಿ: ಕರ್ನಾಟಕ ರಾಜ್ಯದಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿಗಳು ಓದುವ ಪಠ್ಯಪುಸ್ತಕವನ್ನುಕೇಸರಿಕರಣಗೊಳಿಸಲಾಗುತ್ತಿದೆ ಎಂದು ಆರೋಪಿಸಿ ಇವತ್ತು ಸಿಎಫ್ಐ ಪ್ರತಿಭಟನೆ ಹಮ್ಮಿಕೊಂಡಿತು.
ನಗರದ ಹುತಾತ್ಮ ಸೈನಿಕ ಸ್ಮಾರಕದ ಎದುರು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ರಾಜ್ಯ ಸರ್ಕಾರವು ಹಲವು ಮಹನೀಯರ ಪಾಠಗಳನ್ನು ಪಠ್ಯದಿಂದ ಕೈಬಿಟ್ಟು ಹೆಡ್ಗೆವಾರ್ ತರಹದ ಆರ್ ಎಸ್ಎಸ್ ಮನಸ್ಥಿತಿಯವರನ್ನು ಪಠ್ಯದಲ್ಲಿ ಅಳವಡಿಸುತ್ತಿದೆ.
ಹೆಡ್ಗೆವಾರ್ ಚಿಂತನೆಗಳು ನಮ್ಮ ಮಕ್ಕಳಿಗೆ ಅಗತ್ಯವಿಲ್ಲ. ಸರ್ವ ಧರ್ಮೀಯರನ್ನು ಒಳಗೊಂಡ ವಿಚಾರಧಾರೆಗಳನ್ನು ವಿದ್ಯಾರ್ಥಿಗಳು ಓದುವಂತಾಗಬೇಕು. ಹೆಡ್ಗೆವಾರ್ ಚಿಂತನೆಗಳು ವಿದ್ಯಾರ್ಥಿಗಳನ್ನು ನಾವೆಲ್ಲಾ ಒಂದೇ ಎಂಬ ಭಾವನೆಯಿಂದ ದೂರಮಾಡುತ್ತದೆ. ಸರಕಾರ ಯಾವುದೇ ಕಾರಣಕ್ಕೂ ಅವರ ವಿಚಾರಧಾರೆಗಳನ್ನು ಪಠ್ಯದಲ್ಲಿ ತುಂಬಬಾರದು. ಮತ್ತು ಪಠ್ಯಪುಸ್ತಕ ಸಮಿತಿಯಿಂದ ರೋಹಿತ್ ಚಕ್ರತೀರ್ಥ ತರಹದಬಲಪಂಥೀಯರನ್ನು ಹೊರಗಿಡಬೇಕು ಎಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಆಗ್ರಹಿಸಿದೆ.
Kshetra Samachara
26/05/2022 08:50 pm