ಕುಂದಾಪುರ: ಉಡುಪಿ ಜಿಲ್ಲೆಯ ಹಿಜಾಬ್ ವಿವಾದ ಬೇರೆ ಬೇರೆ ಸ್ವರೂಪ ಪಡೆದುಕೊಳ್ಳುತ್ತಿದೆ. ಕುಂದಾಪುರದಲ್ಲಿ ಹಿಜಾಬ್ vs ಕೇಸರಿ ವಿವಾದಕ್ಕೆ ಇಂದು ವಿದ್ಯಾರ್ಥಿನಿಯರು ಎಂಟ್ರಿ ಕೊಟ್ಟಿದ್ದಾರೆ. ಕೇಸರಿ ಶಾಲುಗಳನ್ನು ತೊಟ್ಟು ಕಾಲೇಜಿಗೆ ಬಂದ ವಿದ್ಯಾರ್ಥಿನಿಯರು
ಘೋಷಣೆಗಳನ್ನು ಕೂಗಿ ಮೆರವಣಿಗೆ ನಡೆಸಿದರು. ಇವರೆಲ್ಲ ಕುಂದಾಪುರದ ಖಾಸಗಿ ಭಂಡಾರ್ಕಾರ್ಸ್ ಕಾಲೇಜಿನ ವಿದ್ಯಾರ್ಥಿನಿಯರಾಗಿದ್ದಾರೆ.
ಹಿಜಾಬ್ ಕಳಚುವ ತನಕ ಕೇಸರಿ ತೊಡುತ್ತೇವೆ,ಅವರಿಗೊಂದು ನ್ಯಾಯ, ನಮಗೊಂದು ನ್ಯಾಯ ಬೇಡ ಎಂದು ಹೇಳಿರುವ ವಿದ್ಯಾರ್ಥಿನಿಯರು ಜೈ ಶ್ರೀರಾಮ್, ಹರಹರಮಹದೇವ ಘೋಷಣೆ ಮಾಡಿದರು.
Kshetra Samachara
05/02/2022 11:00 am