ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಸಂಘಟನೆಯವರು ಹೇಳಿದ್ರೆ ವಿದ್ಯಾರ್ಥಿನಿಯರು ಭಯೋತ್ಪಾದಕರಾಗ್ತಾರಾ: ರಘುಪತಿ ಭಟ್ ಗರಂ!

ಉಡುಪಿ: ಇಬ್ಬರು ಹಿಜಾಬ್ ಧಾರಿ ವಿದ್ಯಾರ್ಥಿನಿಯರು ಇವತ್ತು ಪರೀಕ್ಷಾ ಕೇಂದ್ರಕ್ಕೆ ತೆರಳಿ ಡ್ರಾಮಾ ಮಾಡಿದ್ದಕ್ಕೆ ಶಾಸಕ ರಘುಪತಿ ಭಟ್ ಗರಂ ಆಗಿದ್ದಾರೆ.

ಇವರೇನು ಹೊಟ್ಟೆಗೆ ತಿಂತಾರೆ? ಈ ಮೊದಲು ಇವರನ್ನು ಮುಗ್ದರು,ಇವರ ಹಿಂದೆ ಸಂಘಟನೆಯವರಿದ್ದಾರೆ ಎಂದು ಹೇಳುತ್ತಿದ್ದೆವು. ಆದರೆ ಇವರು ಮುಗ್ಧರಲ್ಲ.ಸಂಘಟನೆಯವರು ನಾಳೆ ಭಯೋತ್ಪಾದಕರಾಗಲು ಹೇಳುತ್ತಾರೆ,ಇವರು ಆಗ್ತಾರಾ? ಅವರು ನಾಳೆ ಬಾಂಬ್ ಹಾಕಲು ಹೇಳ್ತಾರೆ ,ಇವರು ಬಾಂಬ್ ಹಾಕ್ತಾರಾ ಎಂದು ಪ್ರಶ್ನಿಸಿದ್ದಾರೆ.

ನಾನು ಈ ಕ್ಷೇತ್ರದ ಶಾಸಕ ನಮ್ಮ ಕಾಲೇಜಿನ ಶಾಂತಿ ಕದಡಲು ಬಿಡುವುದಿಲ್ಲ.ಯಾರೋ ಬೇರೆ ವಿದ್ಯಾರ್ಥಿನಿಯರಾಗಿದ್ದರೆ ಕ್ಷಮಿಸಬಹುದಿತ್ತು.ಆದರೆ ನ್ಯಾಯಾಲಯಕ್ಕೆ ಹೋದ ವಿದ್ಯಾರ್ಥಿನಿಯರಿಗೆ ಇಷ್ಟೂ ಗೊತ್ತಿಲ್ವಾ? ನಾಳೆ ಇದೇ ಡ್ರಾಮಾ ಮುಂದುವರೆಸಿದರೆ ನೆಟ್ಟಗಿರುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

Edited By : Manjunath H D
PublicNext

PublicNext

22/04/2022 04:10 pm

Cinque Terre

27.08 K

Cinque Terre

10

ಸಂಬಂಧಿತ ಸುದ್ದಿ