ಉಡುಪಿ: ಉಡುಪಿ ಸರಕಾರಿ ಪದವಿ ಪೂರ್ವ ಕಾಲೇಜಿನ ಆರು ವಿದ್ಯಾರ್ಥಿನಿಯರ ಪೋಷಕರು ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು. ಸಂಸ್ಥೆಯಲ್ಲಿ ಈಗ ಗೊಂದಲ ಇಲ್ಲ,ತರಗತಿಗಳು ಯಥಾಪ್ರಕಾರ ನಡೆಯುತ್ತಿವೆ ಎಂದು ಸರಕಾರಿ ಬಾಲಕಿಯರ ಪಿಯು ಕಾಲೇಜಿನ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಯಶ್ ಪಾಲ್ ಸುವರ್ಣ ಹೇಳಿದ್ದಾರೆ.
ಮಾಧ್ಯಮದ ಜೊತೆ ಮಾತನಾಡಿದ ಅವರು ,ಸರಕಾರಿ ಪದವಿ ಪೂರ್ವ ಕಾಲೇಜು- ಬಾಲಕಿಯರ ಹೈಸ್ಕೂಲ್ ಆರಂಭವಾಗಿದೆ. ಸರಕಾರದ ಆದೇಶ ಮತ್ತು ಕೋರ್ಟಿನ ಮಧ್ಯಂತರ ತೀರ್ಪನ್ನು ಪಾಲಿಸಲಾಗುತ್ತಿದೆ.ಸಂಸ್ಥೆಯಲ್ಲಿ ಯಾವುದೇ ಸಮಸ್ಯೆ ಮತ್ತು ಗೊಂದಲಗಳಿಲ್ಲ.ಆರು ಮಂದಿ ವಿದ್ಯಾರ್ಥಿನಿಯರು ತರಗತಿಗೆ ಹಾಜರಾಗಿಲ್ಲ.ಇಂದು ಅಥವಾ ನಾಳೆ ಕೋರ್ಟಿನ ತೀರ್ಪನ್ನು ನಿರೀಕ್ಷಿಸಲಾಗಿದೆ ಎಂದು ಹೇಳಿದ್ದಾರೆ.
Kshetra Samachara
17/02/2022 02:34 pm