ಮುಲ್ಕಿ: ಸ್ವಾತಂತ್ರ್ಯ ಭಾರತದ ಅಮೃತ ಮಹೋತ್ಸವದ ಅಂಗವಾಗಿ ಮುಲ್ಕಿ ಮೂಡಬಿದ್ರೆ ವಿಧಾನ ಸಭಾ ಕ್ಷೇತ್ರದಲ್ಲಿ ಬ್ರಹತ್ ತಿರಂಗ ಪಾದಯಾತ್ರೆಗೆ ಚಾಲನೆ ದೊರತಿದೆ.
ದೇಶಭಕ್ತ ಕಾರ್ನಾಡು ಸದಾಶಿವ ರಾವ್ ರವರ ಹುಟ್ಟೂರು ಮುಲ್ಕಿಯ ಬಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಕ್ಷೇತ್ರದ ಅರ್ಚಕ ಶ್ರೀಪತಿ ಉಪಾಧ್ಯಾಯ ಹಾಗೂ ನರಸಿಂಹ ಭಟ್ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ದೇವಸ್ಥಾನದ ಅನುವಂಶಿಕ ಹಾಗೂ ಆಡಳಿತ ಮೊಕ್ತೇಸರ ದುಗ್ಗಣ್ಣ ಸಾವಂತರು, ಮನೋಹರ ಶೆಟ್ಟಿ ಸಹಕಾರದೊಂದಿಗೆ ಸಂಸದ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಾಗೂ ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್ ಚಾಲನೆ ನೀಡಿದರು.
ಮುಲ್ಕಿಯಿಂದ ಮೂಡಬಿದ್ರೆ ತನಕ 100 ಮೀಟರ್ ಉದ್ದದ ರಾಷ್ಟ್ರ ಧ್ವಜ ತಿರಂಗ ಯಾತ್ರೆ ಹೆಸರಿನೊಂದಿಗೆ ಮುಲ್ಕಿಯಿಂದ ಮೂಡಬಿದ್ರೆವರೆಗೆ ಸಾಗಲಿದೆ.
ಮೆರವಣಿಗಯಲ್ಲಿ ಭಾರತ ಮಾತೆಯ ಭಾವ ಚಿತ್ರ, ನಂತರ ದೇಶ ಭಕ್ತ ಕಾರ್ನಾಡು ಸದಾಶಿವ ರಾಯರ, ರಾಮಕೃಷ್ಣ ಪೂಂಜಾ ಭಾವಚಿತ್ರ,ಬಳಿಕ ವೀರ ರಾಣಿ ಅಬ್ಬಕ್ಕರ ಭಾವಚಿತ್ರ ಗಮನ ಸೆಳೆದಿದ್ದು ಮೆರವಣಿಗೆಯಲ್ಲಿ ದೇಶ ಭಕ್ತಿಯನ್ನು ಬಿಂಬಿಸುವ ವಿವಿಧ ಭಜನಾ ತಂಡಗಳು, ಟ್ಯಾಬ್ಲೋ, ಚೆಂಡೆ, ಡೋಲು ಮತ್ತಿತರ ತಂಡಗಳು ಯಾತ್ರೆಯೊಂದಿಗೆ ವಿವಿಧ ಸಂಘ ಸಂಸ್ಥೆಗಳ ಸದಸ್ಯರು ಬಾವುಟವನ್ನು ಹಿಡಿದು ಸಾಗಿದರು.
ದಾರಿಯುದ್ದಕ್ಕೂ ಅಲ್ಲಲ್ಲಿ ದೇಶಭಕ್ತ ನಾಗರಿಕರು ಪುಷ್ಪಾರ್ಚನೆ ಗೈಯುವ ಮೂಲಕ ಧ್ವಜವಂದನೆ ಸಲ್ಲಿಸಿದರು.
ಸುಮಾರು 27 ಕಿ.ಲೋ ಮೀಟರ್ ನಡೆಯುವ ಪಾದಯಾತ್ರೆಗೆ ವಿವಿಧ ಸಂಘ ಸಂಸ್ಥೆಗಳು, ಸಾರ್ವಜನಿಕರು ಸಾಥ್ ನೀಡಿದ್ದು ದಾರಿಯುದ್ದಕ್ಕೂ ವಿವಿಧ ಸಂಘಟನೆಗಳ ದೇಶಭಕ್ತರು ಅಲ್ಲಲ್ಲಿ ಪಾನೀಯ, ಉಪಹಾರದ ವ್ಯವಸ್ಥೆಯನ್ನು ಕಲ್ಪಿಸಿದರು.
Kshetra Samachara
14/08/2022 01:54 pm