ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಿನ್ನಿಗೋಳಿ : ಮಾಜೀ ಪ್ರಧಾನಿ ರಾಜೀವ್ ಗಾಂಧಿ,ಮಾಜೀ ಮುಖ್ಯಮಂತ್ರಿ ದಿ. ದೇವರಾಜ ಅರಸ್ ಜನ್ಮದಿನ ಆಚರಣೆ

ಮುಲ್ಕಿ:ಕಾಂಗ್ರೆಸ್ ಪಕ್ಷ ಯಾವತ್ತು ಕುಟುಂಬ ರಾಜಕಾರಣ ಮಾಡಿಲ್ಲ, ರಾಜೀವ ಗಾಂಧಿಯವರು ಅನಿವಾರ್ಯವಾಗಿ ದೇಶದ ಹಿತಕೋಸ್ಕರ ರಾಜಕೀಯಕ್ಕೆ ಬಂದವರು ಎಂದು ಮಾಜಿ ಸಚಿವ ಅಭಯಚಂದ್ರ ಜೈನ್ ಹೇಳಿದರು

ಅವರು ಕಿನಿಗೋಳಿ ಸ್ವಾಗತ್ ಸಭಾಗೃಹದಲ್ಲಿ ನಡೆದ ಮಾಜೀ ಪ್ರಧಾನಿ ದಿ. ರಾಜೀವ ಗಾಂಧಿ ಮತ್ತು ಮಾಜಿ ಮುಖ್ಯ ಮಂತ್ರಿ ದಿ ದೇವರಾಜ ಅರಸು ರವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಮುಲ್ಕಿ ಯೂತ್ ಕಾಂಗ್ರೇಸ್ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ನಡೆದ ಅನ್ ಲೈನ್ ಸ್ಪರ್ದೆಯಲ್ಲಿ ವಿಜೇತರಾದ ವಿಧ್ಯಾರ್ಥಿಗಳಿಗೆ ಶೃತಿ ವಿ ಪೂಜಾರಿ, ಅಜಿತ್ ಕಾಮತ್, ತನ್ವೀ ರವರಿಗೆ ಬಹುಮಾನ ವಿತರಿಸಲಾಯಿತು.

ಮುಲ್ಕಿ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರಾಗಿ ಆಯ್ಕೆಯಾದ ವೇಣು ವಿನೋದ್ ಶೆಟ್ಟಿ ರವರಿಗೆ ಆದೇಶಪ್ರತಿಯನ್ನು ನೀಡಲಾಯಿತು.

ಈ ಸಂದರ್ಭ ಜಿಲ್ಲಾ ಯೂತ್ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ , ಕಿನ್ನಿಗೋಳಿ ವಲಯ ಪ್ರಜಾಪ್ರತಿನಿ ಅಧ್ಯಕ್ಷ ಪ್ರಮೋದ್ ಕುಮಾರ್, ರಾಜ್ಯ ಹಿಂದುಳಿದ ವರ್ಗಗಳ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಕುಮಾರ್ ಬೊಳ್ಳೂರು, ಮುಲ್ಕಿ ಬ್ಲಾಕ್ ಹಿಂದುಳಿದ ವರ್ಗಗಳ ವಿಭಾಗಗಳ ಅಧ್ಯಕ್ಷ ಯೋಗೀಶ್ ಕೋಟ್ಯಾನ್, ಮೂಲ್ಕಿ ಯುವ ಕಾಂಗ್ರೆಸ್ ನಾಯಕ ಅಶೋಕ್ ಪೂಜಾರ್, ಕೆ.ಪಿ.ಸಿ.ಸಿ ಕೋಅರ್ಡಿನೇಟರ್ ವಸಂತ್ ಬೆರ್ನಾಡ್ ಮತ್ತಿತತರು ಉಪಸ್ಥಿತರಿದ್ದರು.

ಮುಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ್ ಕೋಟ್ಯಾನ್, ಶರತ್ ಶೆಟ್ಟಿ ಕಿನ್ನಿಗೋಳಿ ಮತ್ತು ಪ್ರಕಾಶ್ ಆಚಾರ್ ಕಿನ್ನಿಗೋಳಿ ಕಾರ್ಯಕ್ರಮ ನಿರೂಪಿಸಿದರು.

Edited By : Nagesh Gaonkar
Kshetra Samachara

Kshetra Samachara

20/08/2021 10:56 pm

Cinque Terre

18.55 K

Cinque Terre

3

ಸಂಬಂಧಿತ ಸುದ್ದಿ