ಉಡುಪಿ: ಶ್ರೀ ಕೃಷ್ಣಮಠಕ್ಕೆ ಕರ್ನಾಟಕ ಸರಕಾರದ ನೂತನ ಮೀನುಗಾರಿಕೆ ಮತ್ತು ಬಂದರು ಸಚಿವರಾದ ಅಂಗಾರ ಅವರು ಭೇಟಿ ನೀಡಿ ಶ್ರೀ ಕೃಷ್ಣ ದೇವರ ದರ್ಶನ ಪಡೆದರು. ಪರ್ಯಾಯ ಅದಮಾರು ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರಿಂದ ಅನುಗ್ರಹ ಮಂತ್ರಾಕ್ಷತೆ ಪಡೆದರು.
ಈ ಸಂದರ್ಭದಲ್ಲಿ ಶಾಸಕರಾದ ರಘುಪತಿ ಭಟ್,ಬಿ.ಜೆ.ಪಿ.ಜಿಲ್ಲಾಧ್ಯಕ್ಷರಾದ ಸುರೇಶ ನಾಯಕ್,ಮುಖಂಡರಾದ ಯಶಪಾಲ್ ಸುವರ್ಣ,ಪರ್ಯಾಯ ಮಠದ ವ್ಯವಸ್ಥಾಪಕರಾದ ಗೋವಿಂದರಾಜ್,ಸಿ.ಇ.ಓ ಕಡೆಕಾರ್ ಶ್ರೀಶ ಭಟ್, ಶ್ರೀ ಕೃಷ್ಣ ಸೇವಾ ಸಮಿತಿಯ ಪ್ರದೀಪ್ ರಾವ್ ಮೊದಲಾದವರು ಉಪಸ್ಥಿತರಿದ್ದರು.
Kshetra Samachara
26/01/2021 02:11 pm