ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುಳ್ಯ: ಪ್ರವೀಣ್ ನೆಟ್ಟಾರು ಮನೆಗೆ ಕೇಂದ್ರ ಸಚಿವೆ ಶೋಭಾ ಭೇಟಿ: ಎನ್ಐಎ ತನಿಖೆಯಿಂದ ಸತ್ಯ ತಿಳಿಯಲಿದೆ

ಸುಳ್ಯ: ಹತ್ಯೆಗೀಡಾದ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಮನೆಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಭೇಟಿ ನೀಡಿ ಕುಟುಂಬ ವರ್ಗಕ್ಕೆ ಸಾಂತ್ವನ ಹೇಳಿದರು. ಪ್ರವೀಣ್ ಕುಟುಂಬಸ್ಥರ ಜೊತೆ ಮಾತನಾಡಿದ ಅವರು ಆರ್ಥಿಕ ನೆರವು ಹಸ್ತಾಂತರಿಸಿದರು.

ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು ಪ್ರವೀಣ್ ಹತ್ಯೆ ಪ್ರಕರಣದ ತನಿಖೆಯನ್ನು ಸರಕಾರ ಎನ್ಐಎಗೆ ಹಸ್ತಾಂತರ ಮಾಡಿದೆ. ಎನ್ಐಎ ತನಿಖೆಯಿಂದ ಪ್ರಕರಣದ ಹಿಂದಿನ ನೈಜ ಆರೋಪಿಗಳ ಬಂಧನ ಮಾಡುವುದರ ಜೊತೆಗೆ ಇದರ ಹಿಂದಿನ ಷಡ್ಯಂತ್ರ ಬಯಲಾಗಲಿದೆ ಎಂದು ಹೇಳಿದರು. ಈ ರೀತಿಯ ಘಟನೆಗಳು ನಡೆದು ಅಮಾಯಕರು ಬಲಿಯಾದಾಗ ಆಕ್ರೋಶ, ನೋವು ಬರುವುದು ಸಹಜ. ಈ ರೀತಿಯ ಘಟನೆಗಳು ಮರುಕಳಿಸದಂತೆ ಕಾನೂನು ರೀತಿಯಲ್ಲಿ ಕಠಿಣ ಕ್ರಮ ಅಗತ್ಯ. ಈಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಎಲ್ಲಾ ಕೊಲೆಗಳ ಬಗ್ಗೆ ಸಮಗ್ರ ತನಿಖೆ ಆಗಬೇಕು. ಷಡ್ಯಂತ್ರಗಳು ಬಯಲಾಗಬೇಕು ಎಂದು ಅವರು ಹೇಳಿದರು.

ಬಿಜೆಪಿ ಮುಖಂಡರಾದ ಎಸ್.ಎನ್ ಮನ್ಮಥ, ಎನ್.ಎ ರಾಮಚಂದ್ರ, ಚಂದ್ರ ಕೋಲ್ಚಾರ್, ಪುಲಸ್ಯ ರೈ, ಆಶಾ ತಿಮ್ಮಪ್ಪ, ಅರುಣ್ ಕುಮಾರ್ ಪುತ್ತಿಲ, ಸಂತೋಷ್ ಜಾಕೆ, ಸಹಜ್ ರೈ ಮತ್ತಿತರರು ಉಪಸ್ಥಿತರಿದ್ದರು.

Edited By : Shivu K
PublicNext

PublicNext

31/07/2022 06:25 pm

Cinque Terre

56.85 K

Cinque Terre

8