ಉಡುಪಿ: ದೇಶಾದ್ಯಂತ ಇವತ್ತು ಪಿಎಫ್ ಐ ವಿರುದ್ಧ ಎನ್ ಐ ಎ ಕಾರ್ಯಾಚರಣೆ ನಡೆಸುತ್ತಿದೆ. ಮಂಗಳೂರಿನಲ್ಲೂ ದಾಳಿ ನಡೆದಿದ್ದು ಪಿಎಫ್ ಐ ಮುಖಂಡರ ಬಂಧನ ಆಗಿದೆ.ಇದೇ ವೇಳೆ ಬಂಧನ ಭೀತಿಯಲ್ಲಿ ಪಕ್ಕದ ಜಿಲ್ಲೆಯ ಪಿಎಫ್ ಐ ಮುಖಂಡರೊಬ್ಬರು ಉಡುಪಿಯಲ್ಲಿ
ತಲೆಮರೆಸಿಕೊಂಡಿದ್ದು ಅವರಿಗಾಗಿ ಹುಡುಕಾಟ ನಡೆಯುತ್ತಿದೆ ಎಂದು ಉನ್ನತ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ಎನ್ಐಎ ದಾಳಿಗೆ ಹೆದರಿ ತಲೆಮರೆಸಿಕೊಂಡಿರುವ ಪಿ.ಎಫ್.ಐ ಮುಖಂಡ ಉಡುಪಿಯಲ್ಲಿ ತಲೆ ಮರಿಸಿಕೊಂಡಿದ್ದಾರೆ ಎನ್ನಲಾಗಿದೆ.
ಕಾಪು, ಹಿರಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇವರ ಮೊಬೈಲ್ ನಂಬರ್ ಲೊಕೇಶನ್ ಪತ್ತೆಯಾದ ಹಿನ್ನೆಲೆಯಲ್ಲಿ ಇವೆರಡೂ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
PublicNext
22/09/2022 01:54 pm