ಮಂಗಳೂರು: ವಿಧಾನಸಭೆ ಅಧಿವೇಶನದಲ್ಲಿ ಗೋಹತ್ಯೆ ನಿಷೇಧ ವಿಧೇಯಕ ಅಂಗೀಕಾರ ಹಿನ್ನೆಲೆ ನಗರದ ಪಿವಿಎಸ್ ಕಚೇರಿ ಮುಂಭಾಗ ಗೋಪೂಜೆ ನಡೆಸಿ ಹರ್ಷ ವ್ಯಕ್ತಪಡಿಸಲಾಯಿತು.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಗೋಪೂಜೆ ನಡೆಯಿತು. ಈ ಸಂದರ್ಭ ಮಾತನಾಡಿದ ನಳಿನ್ ಕುಮಾರ್ ಕಟೀಲ್, ನಿರೀಕ್ಷೆಯಂತೆ ಗೋಹತ್ಯೆ ನಿಷೇಧ ಮಸೂದೆ ಜಾರಿಗೊಳಿಸಲಾಗಿದೆ.
ಮುಂದಿನ ದಿನಗಳಲ್ಲಿ ಲವ್ ಜಿಹಾದ್ ವಿರುದ್ಧವೂ ಕಠಿಣ ಕಾನೂನು ಜಾರಿಗೆ ಬರಲಿದೆ. ಗೋಹತ್ಯೆ ನಿಷೇಧ ಮಂಡನೆ ವಿರುದ್ಧ ಕಾಂಗ್ರೆಸ್ ಬೆಂಬಲಿಸದಿರುವುದು ನಿರೀಕ್ಷಿತ. ವಿಧಾನಸಭೆಯಂತೆ ವಿಧಾನ ಪರಿಷತ್ ನಲ್ಲೂ ಮಸೂದೆ ಅಂಗೀಕಾರವಾಗಲಿದೆ.
ಈ ಹಿಂದೆ ಯಡಿಯೂರಪ್ಪನವರು ಜಾರಿಗೆ ತಂದ ಮಸೂದೆ ವಾಪಸ್ ಪಡೆಯುವಾಗ ಚರ್ಚಿಸದೇ ಹೋದ ಕಾಂಗ್ರೆಸ್ ಈಗ ಚರ್ಚೆ ನಡೆಸದೇ ಮಸೂದೆ ಮಂಡಿಸಲಾಗಿದೆ ಅನ್ನೋದರಲ್ಲಿ ಅರ್ಥವೇ ಇಲ್ಲ ಎಂದರು.
ಅಲ್ಲದೇ ರೈತರ ಹೋರಾಟದ ಹಿಂದೆಯೂ ರಾಜಕೀಯವಿದ್ದು, ಅದನ್ನು ಮುನ್ನಡೆಸುವವರನ್ನು ನೋಡಿದ್ರೆ ಗೊತ್ತಾಗುತ್ತದೆ ಎಂದರು.
ಈ ಸಂದರ್ಭ ಕಾರ್ಪೊರೇಟರ್ ಸುಧೀರ್ ಶೆಟ್ಟಿ, ಮನೋಹರ್ ಕದ್ರಿ, ಶಶಿಕಲಾ ಕಾವ, ವೀಣಾ ಮಂಗಲ, ಸತೀಶ್ ಕುಂಪಲ ಸೇರಿದಂತೆ ಹಲವು ಕಾರ್ಯಕರ್ತರು ಉಪಸ್ಥಿತರಿದ್ದರು.
Kshetra Samachara
10/12/2020 12:54 pm