ಮಂಗಳೂರು: ಚುನಾವಣೆಗಾಗಿ ಸಾವಿರಾರು ಕಿ.ಮೀ. ದೂರದ ಹೈದರಾಬಾದ್ ಗೆ ಹೋಗೋ ಅಮಿತ್ ಶಾ, ಹತ್ತು ಕಿ.ಮೀ. ದೂರದಲ್ಲಿರುವ ರೈತರ ಜೊತೆ ಮಾತಾಡಲು ಸಮಯ ಸಿಗದಿರುವುದು ವಿಪರ್ಯಾಸವೇ ಸರಿ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸರಕಾರದ ಜನವಿರೋಧಿ ನಿಲುವಿಗೆ ದೇಶದಲ್ಲಿ ಸೂಕ್ತ ಉತ್ತರ ಸಿಗುತ್ತಿದೆ. ರೈತರ ವಿಶ್ವಾಸ ಪಡೆಯದೆ ಕಾನೂನು ಜಾರಿಗೆ ತರಲು ಹೊರಟಿರುವ ಪರಿಣಾಮ ದೇಶಾದ್ಯಂತ ಪ್ರತಿಭಟನೆ ನಡೆಯುತ್ತಿದೆ. ರಾಜ್ಯದಲ್ಲಿ ದಿಕ್ಕು ತಪ್ಪಿದ ಸರಕಾರದಿಂದ ಜನವಿರೋಧಿ ಕೆಲಸವಾಗುತ್ತಿದೆ. ಇನ್ನೂ ಎರಡು ಕಾನೂನು ತರಲು ಸರಕಾರ ಹೊರಟಿದೆ. ಗೋ ಹತ್ಯೆ, ಲವ್ ಜಿಹಾದ್ ವಿರುದ್ಧ ಕಾನೂನು ತರಲು ಹೊರಟಿದೆ. ಪ್ರಪಂಚದಲ್ಲಿ ಇಲ್ಲದೇ ಇರುವ ಲವ್ ಜಿಹಾದ್ ಗೂ ಕಾನೂನು ತರಲು ಹೊರಟಿದೆ. ಲವ್ ಜಿಹಾದ್ ಕಾಯ್ದೆಯಿಂದ ಉದ್ಯೋಗ ಸೃಷ್ಟಿಯಾಗುತ್ತಾ? ದೇಶದಲ್ಲಿ ಆರ್ಥಿಕ ಸ್ವಾವಲಂಬನೆಯಾಗುತ್ತಾ? ಎಂದು ಪ್ರಶ್ನಿಸಿದರು.
Kshetra Samachara
08/12/2020 02:12 pm