ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಂಟ್ವಾಳ: ತಾಪಂ ಮಾಜಿ ಸದಸ್ಯ ಕಾಂಗ್ರೆಸ್ ನ ಡಿ.ಕೆ.ಹಂಝ ಬಿಜೆಪಿ ಸೇರ್ಪಡೆ

ಬಂಟ್ವಾಳ: ಇತ್ತೀಚೆಗೆ ಬಂಟ್ವಾಳದಲ್ಲಿ ನಡೆದ ಗ್ರಾಮ ಸ್ವರಾಜ್ಯ ಸಮಾವೇಶದಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಗ್ರಾಮಮಟ್ಟದಲ್ಲೂ ಇತರ ಪಕ್ಷಗಳಿಂದ ಬಿಜೆಪಿ ಸಿದ್ಧಾಂತ ಒಪ್ಪಿ ಬರುವವರನ್ನು ಮುಕ್ತವಾಗಿ ಸ್ವಾಗತಿಸುವ ಹೇಳಿಕೆ ನೀಡಿದ ಬೆನ್ನಲ್ಲೇ, ಕಾಂಗ್ರೆಸ್ ನಾಯಕ ಹಾಗೂ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಡಿ.ಕೆ.ಹಂಝ ಬಿಜೆಪಿಗೆ ವಿಧ್ಯುಕ್ತವಾಗಿ ಸೇರ್ಪಡೆಗೊಂಡಿದ್ದಾರೆ.

ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಮತ್ತು ಕಿಯೋನಿಕ್ಸ್ ಅಧ್ಯಕ್ಷ ಕೆ.ಹರಿಕೃಷ್ಣ ಬಂಟ್ವಾಳ್ ಸಮ್ಮುಖದಲ್ಲಿ ಡಿ.ಕೆ.ಹಂಝ ಅವರನ್ನು ಪಕ್ಷದ ಧ್ವಜ ನೀಡಿ ಕ್ಷೇತ್ರಾಧ್ಯಕ್ಷ ದೇವಪ್ಪ ಪೂಜಾರಿ ಬರಮಾಡಿಕೊಂಡರು.

ಈ ಸಂದರ್ಭ ಮಾತನಾಡಿದ ಶಾಸಕ ರಾಜೇಶ್ ನಾಯ್ಕ್, ಮುಂದಿನ ಹಂತದಲ್ಲಿ ಕಾಂಗ್ರೆಸ್ ನ ದೊಡ್ಡ ನಾಯಕರು ಬಿಜೆಪಿ ಸೇರ್ಪಡೆಗೊಳ್ಳಲಿರುವ ಸುಳಿವು ನೀಡಿದರು. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ , ಕಾಂಗ್ರೇಸ್ ಸೇರಿದಂತೆ ಇತರ ಪಕ್ಷಗಳ ಒಳ್ಳೆಯ ಕಾರ್ಯಕರ್ತರನ್ನು ಪಕ್ಷದ ಸಿದ್ಧಾಂತದಡಿಯಲ್ಲಿ ಸ್ವಾಗತಿಸುವುದಾಗಿ ತಿಳಿಸಿದರು.

ಕಿಯೋನಿಕ್ಸ್ ಅಧ್ಯಕ್ಷರಾದ ಹರಿಕೃಷ್ಣ ಬಂಟ್ವಾಳ್, ಬಿಜೆಪಿ ಅಧ್ಯಕ್ಷರಾದ ದೇವಪ್ಪ ಪೂಜಾರಿ. ಬೂಡ ಅಧ್ಯಕ್ಷರಾದ ದೇವದಾಸ ಶೆಟ್ಟಿ. ಕ್ಷೇತ್ರ ಉಪಾಧ್ಯಕ್ಷ ರೊನಾಲ್ಡ್ ಡಿಸೋಜ, ಪ್ರ.ಕಾರ್ಯದರ್ಶಿ ಡೊಂಬಯ ಅರಳ.

ರೈತಮೋರ್ಚಾದ ಜಿಲ್ಲಾ ಪ್ರ.ಕಾರ್ಯದರ್ಶಿ ವಸಂತ ಅಣ್ಣಳಿಕೆ. ಕಾರ್ಯದರ್ಶಿಗಳಾದ ರಮನಾಥ ರಾಯಿ. ಗಣೇಶ್ ರೈ ಮಾಣಿ. ಸೀತಾರಾಮ ಪೂಜಾರಿ, ಜಿಲ್ಲಾ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸುದರ್ಶನ ಬಜ ಉಪಸ್ಥಿತರಿದ್ದರು.ಇದೇ ವೇಳೆ ಜಗದೀಶ್ ಶೆಟ್ಟಿ ಮಾವಂತೂರು, ಚಂದ್ರಹಾಸ ಅರಳ. ಮುಸ್ತಾಫ ಮೂಲರಪಟ್ಣ ಸಹಿತ ಪ್ರಮುಖ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆಗೊಂಡರು.

Edited By :
Kshetra Samachara

Kshetra Samachara

05/12/2020 04:28 pm

Cinque Terre

21.3 K

Cinque Terre

2

ಸಂಬಂಧಿತ ಸುದ್ದಿ