ಮಂಗಳೂರು: ಮಹಾಚೇತನರ ನಾಮಕರಣ ವಿಚಾರ ಮಂಗಳೂರು ಮಹಾನಗರ ಪಾಲಿಕೆ ಸಭೆಯಲ್ಲಿ ಆಡಳಿತರೂಢ ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರ ನಡುವಿನ ಜಂಗೀಕುಸ್ತಿಗೆ ವೇದಿಕೆಯಾಯಿತು. ಸಭೆ ಅರಂಭದಲ್ಲಿ ಪ್ರತಿಪಕ್ಷ ನಾಯಕ ಅಬ್ದುಲ್ ರವೂಫ್ ಮಂಗಳೂರು ರೈಲ್ವೇ ನಿಲ್ದಾಣಕ್ಕೆ ಬ್ರಹ್ಮಶ್ರೀ ನಾರಾಯಣ ಗುರು ಹೆಸರನ್ನ ನಾಮಕರಣಗೊಳಿಸುವಂತೆ ನಿರ್ಣಯ ಅಂಗೀಕರಿಸಲು ಒತ್ತಾಯಿಸಿದರು. ಈ ಸಂದರ್ಭ ಕಾಂಗ್ರೆಸ್ ನಡೆಯನ್ನ ಬಿಜೆಪಿ ಸದಸ್ಯರು ಟೀಕಿಸಿದ್ದು, ಲೇಡಿಹಿಲ್ ವೃತ್ತಕ್ಕೆ ನಾರಾಯಣ ಗುರುಗಳ ನಾಮಕರಣಕ್ಕೆ ವಿರೋಧಿಸಿದ್ದ ಕಾಂಗ್ರೆಸ್ ನಾಯಕರು ಈಗ ಪಾಲಿಕೆಯಲ್ಲಿ ನಾಟಕ ನಡೆಸುತ್ತಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡರು. ಈ ವಿಚಾರ ಎರಡೂ ಪಕ್ಷಗಳ ನಡುವಿನ ಸದಸ್ಯರ ಜಂಗೀಕುಸ್ತಿಗೆ ವೇದಿಕೆಯಾಗಿ ಒಂದೊಮ್ಮೆ ಪಾಲಿಕೆ ಸದಸ್ಯರು ಸದನದ ಬಾವಿಗಿಳಿದು ಎಲ್ಲಾ ತಮ್ಮ ತಮ್ಮ ನಡುವೆ ವಾಗ್ದಾಳಿ ನಡೆಸುತ್ತ ಪಾಲಿಕೆ ಸಭೆಯಲ್ಲಿ ಇನ್ನಿತರ ಅಭಿವೃದ್ಧಿ ಪರ ಚರ್ಚೆ ನಡೆಸಲು ಆಗದ ರೀತಿ ವರ್ತಿಸಿದರು.
Kshetra Samachara
02/12/2020 04:03 pm