ಉಡುಪಿ: ಹಿಂದೂ ಧರ್ಮ ಏನು ಬಿಜೆಪಿಗರ ಸ್ವತ್ತಾ? ಎಂದು ಉಡುಪಿಯಲ್ಲಿ ಡಿ.ಕೆ ಶಿವಕುಮಾರ್ ಹೇಳಿಕೆಗೆ ತಿರುಗೇಟು ನೀಡಿರುವ ಸಂಸದೆ ಶೋಭಾ ಕರಂದ್ಲಾಜೆ, ಕರಾವಳಿಯನ್ನು ನಾವು ದತ್ತು ತಗೊಂಡಿದ್ದೇವೆ.
ಕರ್ನಾಟಕ ಕರಾವಳಿ ನಮ್ಮದೇ. ಉಡುಪಿಯ ಐವರು ಶಾಸಕರು ಬಿಜೆಪಿಯವರೇ' ಎಂದು ಟ್ರಬಲ್ ಶೂಟರ್ ಗೆ ಟಾಂಗ್ ಕೊಟ್ಟಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದೆ ಕಾಂಗ್ರೆಸ್ ಜನವಿರೋಧಿ ನೀತಿಗೆ ಕರಾವಳಿ ಜನ ತಕ್ಕ ಪಾಠ ಕಲಿಸಿದ್ದಾರೆ.
ಡಿಕೆ ಶಿವಕುಮಾರ್ ಯಾವ ಆಟವೂ ಕರಾವಳಿಯಲ್ಲಿ ನಡೆಯಲ್ಲ. ದೇವರ ವಿಚಾರದಲ್ಲಿ ನಾವು ರಾಜಕೀಯ ಮಾಡುತ್ತಾ ಇಲ್ಲ. ನಾವು ದೇವರ ಪರ ನಿಂತವರು.
ಡಿಕೆಶಿ ಚುನಾವಣೆ ಬಂದಾಗ ದೇವಸ್ಥಾನ ತಿರುಗುತ್ತಾರೆ. ರಾಹುಲ್ ಗಾಂಧಿ ಚುನಾವಣೆ ಬಂದ್ರೆ ಮಾನಸ ಸರೋವರ, ಕೇದಾರ, ಕೈಲಾಸಕ್ಕೆ ಹೋಗ್ತಾರೆ.
ಉಳಿದ ದಿನಗಳಲ್ಲಿ ಚರ್ಚ್ ಗೆ ಹೋಗ್ತಾರೆ ಇದು ಅವರ ನೀತಿ ಎಂದು ಕಿಡಿಕಾರಿದರು.
ಇದೇ ವೇಳೆ ಸುಳ್ಳು ಹೇಳುವುದರಲ್ಲಿ ಬಿಎಸ್ವೈ ಮಿನಿ ಮೋದಿ ಎಂದು ಹೇಳಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧವೂ ಶೋಭಾ ಕಿಡಿಕಾರಿದ್ದಾರೆ.
ಜಾತಿ ಒಡೆಯೋದ್ರಲ್ಲಿ ಸಿದ್ದರಾಮಯ್ಯ ನಿಸ್ಸೀಮ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಹೇಗೆ ಆಡಳಿತ ಮಾಡಿದ್ದಾರೆ ನೋಡಿದ್ದೇವೆ.
ಕೋಮುಗಳನ್ನು ಒಡೆದು ಆಳುವ ನೀತಿ ಮಾಡಿದ್ರಿ. ಅಭಿವೃದ್ಧಿಗಿಂತ ಹೆಚ್ಚಾಗಿ ಜಾತಿ ಒಡೆಯುವುದರಲ್ಲಿ ಮಗ್ನರಾಗಿದ್ರಿ ಎಂದು ಸಿಡಿಮಿಡಿಗೊಂಡರು.
ನರೇಂದ್ರ ಮೋದಿ ಕೊಟ್ಟ ಅಕ್ಕಿ ಗೋಧಿ ಬಳಕೆ ಮಾಡಿಕೊಂಡ್ರಿ. ನಾನೇ ಅನ್ನಭಾಗ್ಯ ಯೋಜನೆ ಕೊಟ್ಟೆ ಎಂದು ಸುಳ್ಳು ಹೇಳಿದ್ರಿ.
ಸುಳ್ಳು ಹೇಳುವುದರಲ್ಲಿ ಯಾರಾದರೂ ನಿಪುಣರು ಇದ್ದರೆ ಅದು ಕಾಂಗ್ರೆಸ್ಸಿನವರು ಎಂದು ತಿಳಿಸಿದರು.
Kshetra Samachara
30/11/2020 02:59 pm