ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುರತ್ಕಲ್: ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಸಲ್ಲದು: ಮೊಯ್ದೀನ್ ಬಾವಾ

ಮಂಗಳೂರು: ಸುರತ್ಕಲ್ ಕಾನ ಕಟ್ಲ ಪರಿಶಿಷ್ಟ ಜಾತಿ ಪಂಗಡದ ಕಾಲೊನಿಯಲ್ಲಿ ಕಳೆದ ಹಲವು ದಿನಗಳಿಂದ ನಿರಂತರವಾಗಿ ಒಳಚರಂಡಿ ತ್ಯಾಜ್ಯ ನೀರು ಸೋರಿಕೆಯಾಗುತ್ತಿದ್ದು, ಸುತ್ತಮುತ್ತಲಿನ ಜನರು ಕುಡಿಯುವ ನೀರಿನ ಮೂಲ ಕಳೆದುಕೊಂಡಿದ್ದಾರೆ ಎಂದು ಮಂಗಳೂರು ಉತ್ತರ ಕ್ಷೇತ್ರ ಮಾಜಿ ಶಾಸಕ ಮೊಯ್ದೀನ್ ಬಾವಾ ಆರೋಪಿಸಿದರು. ಒಳಚರಂಡಿ ಸೋರಿಕೆ ದುರಸ್ತಿ ಪಡಿಸುವಂತೆ ಆಗ್ರಹಿಸಿ ಕಾನ ಕಟ್ಲದಲ್ಲಿ ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ತ್ಯಾಜ್ಯ ಸೋರಿಕೆಯಿಂದ ದುರ್ವಾಸನೆ ಹರಡಿ ಕೊರೊನಾ ಕಾರಣದ ಜೊತೆ ಎರಡೆರಡು ಮಾಸ್ಕ್ ಹಾಕಿ ದಿನ ದೂಡುವಂತೆ ಆಗಿದೆ. ದುರಸ್ತಿ ಮಾಡಿಕೊಡುವಂತೆ ಅಧಿಕಾರಿಗಳಲ್ಲಿ ಹೇಳಿದರೆ ಇನ್ನೂ ಕ್ರಮ ಕೈಗೊಂಡಿಲ್ಲ. ಬಿಜೆಪಿ ಶಾಸಕರು ಈ ಭಾಗದಲ್ಲಿ ಆಯ್ಕೆಯಾದ ಬಳಿಕ ಅಭಿವೃದ್ಧಿ ನಿಂತ ನೀರಾಗಿದೆ. ಕಾನ, ಬಾಳ ರಸ್ತೆಗಳು ಇಂದು ಹೊಂಡಗುಂಡಿಗಳಾಗಿ ಓಡಾಡಲು ಸಾಧ್ಯವಾಗುತ್ತಿಲ್ಲ. ಅಪಘಾತಗಳ ಸಂಖ್ಯೆ ಅಧಿಕವಾಗತೊಡಗಿದೆ. ತಾನಿದ್ದ ಸಂದರ್ಭ ಚಾಲನೆ ಕೊಟ್ಟ ಯಾವುದೇ ಕೆಲಸ ಪೂರ್ತಿಯಾಗಿಲ್ಲ. ಯಾವುದೇ ಕಾರಣಕ್ಕೂ ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಸಲ್ಲದು ಎಂದರು. ಪ್ರತಿಭಟನೆಯಲ್ಲಿ ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ. ಸದಾಶಿವ ಶೆಟ್ಟಿ, ಉಪಾಧ್ಯಕ್ಷ ಗೋವರ್ಧನ ಶೆಟ್ಟಿಗಾರ್, ಬಶೀರ್ ಬೈಕಂಪಾಡಿ, ಮನಪಾ ಸದಸ್ಯ ಅನಿಲ್ ಕುಮಾರ್, ಆನಂದ ಅಮೀನ್, ಅಬ್ದುಲ್ ಜಲೀಲ್, ರಾಜ ಕಟ್ಲ ಮತ್ತಿತರರು ಉಪಸ್ಥಿತರಿದ್ದರು.

Edited By : Nagesh Gaonkar
Kshetra Samachara

Kshetra Samachara

28/11/2020 10:29 pm

Cinque Terre

24.95 K

Cinque Terre

2

ಸಂಬಂಧಿತ ಸುದ್ದಿ