ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು ಉತ್ತರ ಬಿಜೆಪಿಯಿಂದ ಮಂಡಲ ಪ್ರಶಿಕ್ಷಣ ವರ್ಗ ಸಮಾರೋಪ

ಮುಲ್ಕಿ:ಭಾರತೀಯ ಜನತಾ ಪಾರ್ಟಿಯ ಮಂಗಳೂರು ನಗರ ಉತ್ತರದ ವತಿಯಿಂದ ಆಯೋಜಿಸಲಾದ ಎರಡು ದಿನಗಳ ಮಂಡಲ ಪ್ರಶಿಕ್ಷಣ ವರ್ಗದ ಸಮಾರೋಪ ಸಮಾರಂಭ ಶುಕ್ರವಾರ ಜರುಗಿತು. ಕಂದಾವರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಹರ್ಷಿತಾ ಸಭಾಂಗಣದಲ್ಲಿ ನಡೆದ ಸಮಾರೋಪ ಸಮಾರಂಭ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಾಜಪಾ ದಕ ಜಿಲ್ಲಾಧ್ಯಕ್ಷರಾದ ಸುದರ್ಶನ ಮೂಡಬಿದಿರೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಮಂಗಳೂರು ನಗರ ಉತ್ತರ ಶಾಸಕರಾದ ಡಾ.ವೈ ಭರತ್ ಶೆಟ್ಟಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷೆ ಪ್ರಭಾ ಮಾಲಿನಿ, ಮಂಡಲ ಅಧ್ಯಕ್ಷರಾದ ತಿಲಕ್ ರಾಜ್ ಕೃಷ್ಣಾಪುರ,ರಾಜೇಶ್ ಕಾವೇರಿ

ಜಿಲ್ಲಾ ಸಹ ಪ್ರಭಾರಿ,ಸುಧಾಕರ್ ಆಚಾರ್ಯ, ಜಿಲ್ಲಾ ಪ್ರಶಿಕ್ಷಣ ಪ್ರಕೋಷ್ಠ ಸಹ ಸಂಚಾಲಕರು,ರಾಜೇಶ್ ಶೆಟ್ಟಿಸಲ್ಲಾಜೆ

ಮಂಗಳೂರು ನಗರ ಉತ್ತರ ಮಂಡಲದ ಪ್ರಶಿಕ್ಷಣ ಪ್ರಕೋಷ್ಠದ ಸಂಚಾಲಕರು, ಹಾಗೂ ಮಂಡಲ ಪ್ರಶೀಕ್ಷಣದ ಎಲ್ಲ ಅಪೇಕ್ಷಿತ ಶಿಬಿರಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Edited By : Nagaraj Tulugeri
Kshetra Samachara

Kshetra Samachara

28/11/2020 12:45 pm

Cinque Terre

5.01 K

Cinque Terre

0

ಸಂಬಂಧಿತ ಸುದ್ದಿ