ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಆರೆಸ್ಸೆಸ್ ಸೌಹಾರ್ದತೆ, ಭಾವೈಕ್ಯತೆಯ ದೊಡ್ಡ ಶತ್ರು; ಹರಿಹಾಯ್ದ ಬಿ.ಕೆ. ಹರಿಪ್ರಸಾದ್

ಮಂಗಳೂರು: ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಸಮಿತಿ ವತಿಯಿಂದ "ಸಂಚುಗಾರ ಸಂಘ ಪರಿವಾರ" ಪುಸ್ತಕದ ವಿಮರ್ಶೆ ಮತ್ತು ಸಂವಾದ ಮಂಗಳೂರಿನ ಸಹೋದಯ ಸಭಾಂಗಣದಲ್ಲಿ ನಡೆಯಿತು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಾಜಿ ರಾಜ್ಯಸಭಾ ಸದಸ್ಯ, ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಮಾತನಾಡಿ, 'ಆರ್ ಎಸ್ ಎಸ್ ಹಾಗೂ ಸಂಘ ಪರಿವಾರ ಕೋಮು ಸೌಹಾರ್ದತೆ ಮತ್ತು ಭಾವೈಕ್ಯತೆಯ ದೊಡ್ಡ ಶತ್ರು. ಇದರ ವಿರುದ್ಧ ಎಲ್ಲರೂ ಒಂದಾಗಿ ಭಾರತ ದೇಶವನ್ನು ಉಳಿಸಬೇಕಾಗಿದೆ ಎಂದರು'.

ಕ್ಯಾಂಪಸ್ ಫ್ರಂಟ್ ರಾಜ್ಯಾಧ್ಯಕ್ಷ ಫಯಾಝ್ ದೊಡ್ಡಮನೆ ಮಾತನಾಡಿ, 'ಸಂಘ ಪರಿವಾರವನ್ನು ವಿರೋಧಿಸುವ ಧ್ವನಿಗಳು ಒಂದಾಗಬೇಕಾದ ಪರಿಸ್ಥಿತಿಯಲ್ಲಿ ನಾವಿದ್ದೇವೆ‌. ನಮ್ಮ ದೇಶ ಭಾರತವನ್ನು ಉಳಿಸಬೇಕೆಂಬ ಉದ್ದೇಶವಿರುವವರು ಫ್ಯಾಸಿಸಂ ವಿರುದ್ಧದ ತಂತ್ರಗಾರಿಕೆ ಮಾಡಬೇಕಾಗಿದೆ. ಪ್ರಸ್ತುತ ಈ ದೇಶವನ್ನು ಸರಿಯಾಗಿ ತಿಳಿದುಕೊಂಡಂತಹ, ಧೈರ್ಯವಂತ ಮತ್ತು ನೈತಿಕತೆ ಇರುವ ನಾಯಕತ್ವದ ಅಗತ್ಯತೆಯಿದೆ. ಆ ನಾಯಕತ್ವದ ಮೂಲಕ ಹೊಸ ಬದಲಾವಣೆಯನ್ನು ನಾವು ಕಾಣಬೇಕಿದೆ ಎಂದರು.

ಮಂಗಳೂರು ವಿವಿ ಕಾಲೇಜಿನ ಪ್ರಾಧ್ಯಾಪಕ ಪ್ರೊ. ಪಟ್ಟಾಭಿರಾಮ ಸೋಮಯಾಜಿ ಹಾಗೂ ಕ್ಯಾಂಪಸ್ ಫ್ರಂಟ್ ರಾಷ್ಟ್ರೀಯ ಕಾರ್ಯದರ್ಶಿ ಇರ್ಷಾದ್ ಕಾವು ಮಾತನಾಡಿದರು. ವಿಮೆನ್ ಇಂಡಿಯಾ ಮೂವ್ ಮೆಂಟ್ ರಾಜ್ಯಾಧ್ಯಕ್ಷೆ ಶಾಹಿದಾ ತಸ್ನೀಮ್, ಸಿಎಫ್ ಐ ಮಂಗಳೂರು ಜಿಲ್ಲಾಧ್ಯಕ್ಷ ಹಸನ್ ಸಿರಾಜ್ ಉಪಸ್ಥಿತರಿದ್ದರು.

ರಾಜ್ಯ ಸಮಿತಿ ಸದಸ್ಯ ಇಮ್ರಾನ್ ಪಿ.ಜೆ. ಸ್ವಾಗತಿಸಿದರು. ಸಮಿತಿ ಸದಸ್ಯ ರಿಯಾಝ್ ಕಡಂಬು ನಿರೂಪಿಸಿದರು.

Edited By : Nagaraj Tulugeri
Kshetra Samachara

Kshetra Samachara

28/11/2020 11:55 am

Cinque Terre

6.25 K

Cinque Terre

7

ಸಂಬಂಧಿತ ಸುದ್ದಿ