ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಕೆಪಿಸಿಸಿ ಅಧ್ಯಕ್ಷ ಡಿಕೆಶಿ ನಾಳೆ ಉಡುಪಿಗೆ: ಸ್ವಾಗತಕ್ಕೆ ಉಡುಪಿ ಕಾಂಗ್ರೆಸ್ ಸಜ್ಜು

ಉಡುಪಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನಾಳೆ ಉಡುಪಿ ಜಿಲ್ಲೆಗೆ ಆಗಮಿಸಲಿದ್ದಾರೆ.ನಾಳೆ ಸಂಜೆ ಕೊಲ್ಲೂರು ಶ್ರೀ ಮೂಕಾಂಬಿಕೆ ದೇವಿಯ ದರ್ಶನ ಮಾಡಲಿರುವ ಡಿಕೆಶಿ ಬಳಿಕ ಉಡುಪಿಯಲ್ಲಿ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರ ಬೃಹತ್ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಈ ಹಿನ್ನೆಲೆಯಲ್ಲಿ ಇವತ್ತು ಬ್ರಹ್ಮಗಿರಿ ಕಾಂಗ್ರೆಸ್ ಭವನದಲ್ಲಿ ಜಿಲ್ಲಾ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಹಾಗೂ ವಿವಿಧ ಘಟಕಗಳ ಸಭೆ ನಡೆಯಿತು. ಉಡುಪಿ ನಗರದೆಲ್ಲೆಡೆ ಡಿಕೆಶಿ ಸ್ವಾಗತಕ್ಕೆ ಬ್ಯಾನರ್ ಹಾಕಲಾಗಿದ್ದು, ಪಕ್ಷದ ಧ್ವಜ ರಾರಾಜಿಸುತ್ತಿದೆ. ಉಡುಪಿಯ ಬ್ರಹ್ಮಗಿರಿಯಲ್ಲಿರುವ ಕಾಂಗ್ರೆಸ್ ಭವನದಲ್ಲಿ ಡಿ.ಕೆ. ಶಿವಕುಮಾರ್ ಅವರನ್ನು ಸ್ವಾಗತಿಸಲು ಭರದ ಸಿದ್ಧತೆ ನಡೆಯುತ್ತಿವೆ.

Edited By : Manjunath H D
Kshetra Samachara

Kshetra Samachara

27/11/2020 04:21 pm

Cinque Terre

24.16 K

Cinque Terre

5

ಸಂಬಂಧಿತ ಸುದ್ದಿ