ಮಂಗಳೂರು: ಬಿಜೆಪಿ ಸರ್ಕಾರ ಇದೀಗ ವಿಶೇಷವಾಗಿ ಮರಾಠಿಗರಿಗೆ ಪ್ರಾಧಿಕಾರ ಕೊಡಲು ಸಿದ್ಧವಾಗಿದೆ. ಒಂದು ವೇಳೆ ಮುಖ್ಯಮಂತ್ರಿಗಳು ಮರಾಠ ಭಾಷೆಗೆ ಪ್ರಾಧಿಕಾರ ಕೊಡುವುದಾರೆ ನಮ್ಮ ತುಳು ಭಾಷೆಗೂ ಪ್ರಾಧಿಕಾರ ಕೊಡಬೇಕು. ತುಳು ಭಾಷೆಗೆ ವಿಶೇಷ ಸ್ಥಾನಮಾನ, ಮಹತ್ವ ಇದೆ. ಯಾಕೆ ಮುಖ್ಯ ಮಂತ್ರಿಗಳು ತುಳು ಭಾಷೆಗೆ ಪ್ರಾಧಿಕಾರ ಕೊಡುವ ಯೋಚನೆ ಮಾಡಲಿಲ್ಲ. ಕನ್ನಡ ಭಾಷೆ ಮತ್ತು ತುಳುವನ್ನು ದೊಡ್ಡಣ್ಣ ಅಂಥ ಕರೆಯುತ್ತೇವೆ. ಆದರೆ, ಅವರಿಗೆ ತುಳು ಭಾಷೆ ಯಾಕೆ ಕಾಣಿಸಲಿಲ್ಲ ಎಂದು ಬಿ.ಕೆ. ಹರಿಪ್ರಸಾದ್ ಪ್ರಶ್ನಿಸಿದರು. ಪತ್ರಿಕಾಗೋಷ್ಠಿಯಲ್ಲಿ ಸುರೇಶ್ ಶೆಟ್ಟಿ, ರವೂಫ್,ಶಶಿಧರ್ ಹೆಗ್ಡೆ ಇನ್ನಿತರರು ಉಪಸ್ಥಿತರಿದ್ದರು.
Kshetra Samachara
27/11/2020 02:09 pm