ಮುಲ್ಕಿ: ವಿಜಯ ಪದವಿ ಕಾಲೇಜು ಹಾಗೂ ವಿಜಯ ಪದವಿ ಪೂರ್ವ ಕಾಲೇಜು ಮುಲ್ಕಿ ಆಶ್ರಯದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಎನ್. ಸಿ. ಸಿ. ಆಶ್ರಯದಲ್ಲಿ "ರಾಷ್ಟ್ರೀಯ ಸಂವಿಧಾನ ದಿನ" ಕಾರ್ಯಕ್ರಮ ಜರುಗಿತು.
ಸಂಪನ್ಮೂಲ ವ್ಯಕ್ತಿಯಾಗಿ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಚೆನ್ನ ಪೂಜಾರಿ ಮಾತನಾಡಿ, ಭಾರತೀಯ ಸಂವಿಧಾನ ವಿಶ್ವದಲ್ಲಿಯೇ ಶ್ರೇಷ್ಠ ಸಂವಿಧಾನ. ಸಂವಿಧಾನದ ತತ್ವವನ್ನು ಎಲ್ಲರೂ ಪಾಲಿಸಬೇಕು ಮತ್ತು ಗೌರವಿಸಬೇಕು.
ಭಾರತೀಯರಿಗೆ ಸಂವಿಧಾನವೇ ಶ್ರೇಷ್ಠ ಗ್ರಂಥ. ಸಮಾನತೆ, ಜಾತ್ಯತೀತತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವ ಬೆಳೆಸಿಕೊಂಡು ನಾವು ಬದುಕಬೇಕು ಎಂಬುದನ್ನು ತಿಳಿಸಿದರು.
ಅಧ್ಯಕ್ಷತೆಯನ್ನು ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ಕೆ.ನಾರಾಯಣ ಪೂಜಾರಿ ವಹಿಸಿದ್ದರು. ವಿಜಯ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಪಮೀದಾ ಬೇಗಂ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಎಲ್ಸಿ ಕ್ಲಬ್ ಮುಖ್ಯಸ್ಥೆ ಕವಿತಾ ಉಪಸ್ಥಿತರಿದ್ದರು.
ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಜಿತೇಂದ್ರ ವಿ.ರಾವ್ ವಂದಿಸಿದರು. ಕನ್ನಡ ವಿಭಾಗದ ಸೌಮ್ಯ ನಿರೂಪಿಸಿದರು.
Kshetra Samachara
26/11/2020 05:49 pm