ಮೂಡುಬಿದಿರೆ: ಕಟ್ಟಡ ನಿರ್ಮಾಣ ವಲಯದ ಕಾರ್ಮಿಕರ ಅಖಿಲ ಭಾರತ ಸಾರ್ವತ್ರಿಕ ಮುಷ್ಕರದ ಅಂಗವಾಗಿ ಮೂಡುಬಿದಿರೆ ವಲಯ ಸಿಐಟಿಯು ವತಿಯಿಂದ ಬಸ್ ನಿಲ್ದಾಣ ಪ್ರವೇಶದ್ವಾರದ ಎದುರು ಗುರುವಾರ ಪ್ರತಿಭಟನೆ ಸಭೆ ನಡೆಯಿತು.
ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಯಾದವ ಶೆಟ್ಟಿ ಮಾತನಾಡಿ, ದೇಶದಲ್ಲಿ ಕಾರ್ಮಿಕರ, ರೈತರ ಹೋರಾಟ ಹತ್ತಿಕ್ಕುವ ಪ್ರಯತ್ನ ಕೇಂದ್ರ ಸರ್ಕಾರದಿಂದ ನಡೆಯುತ್ತಿದೆ. ಕಾರ್ಮಿಕ ಸಂಘಗಳ ಬೇಡಿಕೆ ಈಡೇರಿಸುವ ಬದಲು ಸರ್ಕಾರ, ಖಾಸಗಿಯವರ ಹಿತಕ್ಕಾಗಿ ಪ್ರಯತ್ನಿಸುತ್ತಿದೆ. ಕಾರ್ಮಿಕರ, ಬಡಜನರಿಗೆ ಮರಣ ಶಾಸನವಾಗುವಂತೆ ಕೇಂದ್ರ ಸರ್ಕಾರ ಕಾಯ್ದೆ ತಿದ್ದುಪಡಿ ಮಾಡುತ್ತಿದೆ. ಬಹುರಾಷ್ಟ್ರೀಯ ಕಂಪೆನಿಗಳ, ಖಾಸಗಿಯವರ ಕೈಗೆ ದೇಶದ ವ್ಯವಸ್ಥೆ ಕೊಟ್ಟು, ಕೋಟ್ಯಂತರ ರೂ. ಹಗರಣವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ ಎಂದರು.
ಸಿಐಟಿಯು ಮೂಡುಬಿದಿರೆ ವಲಯ ಅಧ್ಯಕ್ಷೆ ರಮಣಿ, ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಕಾರ್ಯದರ್ಶಿ ಮನೋಹರ್ ಶೆಟ್ಟಿ, ಜಿಲ್ಲಾ ಉಪಾಧ್ಯಕ್ಷ ಆಲ್ವಿನ್ ಮಿನೇಜಸ್, ಹೋರಾಟದ ಪ್ರಮುಖರಾದ ಕೃಷ್ಣಪ್ಪ ಕೊಣಾಜೆ,ಗಿರಿಜಾ, ರಾಧ, ರಿಯಾಜ್, ಶಂಕರ್ ವಾಲ್ಪಾಡಿ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
26/11/2020 12:46 pm