ಮಂಗಳೂರು: ವಿಘ್ನೇಶ್ ನಾಯಕ್ ಆತ್ಮಹತ್ಯೆ ಪ್ರಕರಣ ಹಲವಾರು ಸಂಶಯಗಳನ್ನು ಹುಟ್ಟುಹಾಕಿದೆ.
ಈ ಬಗ್ಗೆ ರಾಜಕೀಯ ಒತ್ತಡಕ್ಕೆ ಶರಣಾಗದೆ ಪೊಲೀಅಸ್ ಆಯುಕ್ತರೇ ತನಿಖೆಗೆ ಮುಂದಾಗಬೇಕು ಎಂದು ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಿಥುನ್ ರೈ ಆಗ್ರಹಿಸಿದ್ದಾರೆ. ಮಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು,
ಕೆಲವು ವರ್ಷಗಳ ಹಿಂದೆ ವಿನಾಯಕ ಬಾಳಿಗ ಕೊಲೆ ಪ್ರಕರಣದಲ್ಲಿ ವೇದವ್ಯಾಸ ಕಾಮತ್, ನರೇಶ್ ಶೆಣೈ ಜೊತೆ ವಿಘ್ನೇಶ್ ನಾಯಕ್ ಹೆಸರು ಕೇಳಿ ಬಂದಿತ್ತು. ಕ್ವಾಲೀಸ್ ಕಾರ್ ಮಾಲೀಕ ನಾಯಕ್ ಇದರಲ್ಲೇ ಹತ್ಯೆ ಸಂಚು ರೂಪಿಸಿದ್ದರು. ಪ್ರಕರಣ ಬೆಳಕಿಗೆ ಬಂದಾಗ ಕ್ವಾಲೀಸನ್ನು ನರೇಶ್ ಶೆಣೈ, ವಿಘ್ನೇಶ್ ಹೆಸರಲ್ಲಿ ಖರೀದಿಸಿದ್ದರು. ಸಾಕ್ಷಿಯಾಗಿದ್ದ ಇವರು ಶೆಣೈ ಸಂಸ್ಥೆಯ ಸಿಬ್ಬಂದಿ. ಕೊಲೆ ಬಳಿಕ ತಪ್ಪಿಸಿಕೊಂಡಿದ್ದ ಎಂದು ಆರೋಪಿಸಿದರು.
ಈ ಪ್ರಕರಣದ ಕುರಿತು ಸರಿಯಾದ ರೀತಿಯಲ್ಲಿ ತನಿಖೆಯಾಗಲಿ ಎನ್ನುವುದು ನಮ್ಮ ಆಗ್ರಹ. ಬಾಳಿಗ ಸಹೋದರಿ ರಾಧಾಗೂ ಕೊಲೆ ಬೆದರಿಕೆ ಇದ್ದು ಅವರು ಈಗಾಗಲೇ ಪೊಲೀಸರಿಗೆ ದೂರು ನೀಡಿದ್ದಾರೆ, ಅವರು ಹಾಗೂ ಸಾಕ್ಷಿಗಳಿಗೆ ಭದ್ರತೆ ನೀಡಬೇಕು ಎಂದು ಆಗ್ರಹಿಸಿದರು.
ಶೆಣೈ ಕೈವಾಡ ಇದೆಯೇ ಎನ್ನುವುದು ಶಾಸಕರು ಉತ್ತರಿಸಲಿ, ಎಲ್ಲರೂ ದೋಷಮುಕ್ತರಾಗಿ ಬರಲಿ. ಆತ್ಮಹತ್ಯೆಯೋ, ಕೊಲೆಯೋ ಗೊತ್ತಾಬೇಕು. ಶೆಣೈ, ವಿಘ್ನೇಶ್ ಅವರ ತಿಂಗಳ ಕರೆಗಳ ವರದಿ ಬಹಿರಂಗಪಡಿಸಲಿ ಎಂದರು. ಸುದ್ದಿಗೋಷ್ಟಿಯಲ್ಲಿ ಜೆ.ಆರ್.ಲೋಬೋ, ನವೀನ್ ಕುಮಾರ್ ಡಿ'ಸೋಜ ಹಾಗೂ ವಿಶ್ವಾಸ್ ದಾಸ್ ಉಪಸ್ಥಿತರಿದ್ದರು.
Kshetra Samachara
24/11/2020 06:32 pm