ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ : ಕನ್ನಡಪರ ಹೋರಾಟಗಾರರನ್ನು ನಿಂದಿಸಿದ ಯತ್ನಾಳ್ ಗೆ ಡಾ. ರವಿ ಶೆಟ್ಟಿ ಬೈಂದೂರು,ಖಡಕ್ ವಾರ್ನಿಂಗ್ !

ಉಡುಪಿ :ನಾಡು-ನುಡಿಯ ಬಗ್ಗೆ ನಿಂದನೆ ಮಾಡಿದ ಬಸವನಗೌಡ ಪಾಟೀಲ್ ಯತ್ನಾಳ್ ಗೆ ಮಸಿ ಬಳಿದ ವರಿಗೆ 10000 ಸಾವಿರಗಳ ಬಹುಮಾನ ಘೋಷಣೆ ಮಾಡಿದ ಕರ್ನಾಟಕ ಕಾರ್ಮಿಕ ಸಂಘ ವೇದಿಕೆಯ ರಾಜ್ಯಾಧ್ಯಕ್ಷ ರವಿ ಶೆಟ್ಟಿ.

ಕರ್ನಾಟಕದ ಬಗ್ಗೆ ವ್ಯಂಗ್ಯವಾಗಿ ಮತ್ತು ಕನ್ನಡ ಹೋರಾಟಗಾರರನ್ನು ರೋಲ್ಕಾಲ್ ಹೋರಾಟಗಾರರೆಂದು ಅಸಂಬದ್ಧವಾಗಿ ಟೀಕೆ ಮಾಡಿದ ಬಸವನಗೌಡ ಪಾಟೀಲ್ ಇದರಿಂದ ಗರಂ ಆಗಿರುವ ರವಿ ಶೆಟ್ಟಿ ಖಡಕ್ ವಾರ್ನಿಂಗ್ ಮಾಡಿದ್ದಾರೆ.

ಪದೇಪದೇ ಮರಾಠಿಗರನ್ನು ವಹಿಸಿಕೊಂಡು ಕನ್ನಡಿಗರನ್ನು ಮತ್ತು ಕನ್ನಡಪರ ಹೋರಾಟಗಾರರನ್ನು ಅವಮಾನಿಸುತ್ತಿರುವ ಯತ್ನಾಳ್ ವಿರುದ್ಧ ಕಿಡಿಕಾರಿದ ರವಿ ಶೆಟ್ಟಿ, ಯಡಿಯೂರಪ್ಪನವರು ಬಹುಶಃ ಸಚಿವ ಸಂಪುಟ ವಿಸ್ತರಣೆ ಮಾಡುತ್ತಿರಬೇಕು, ಉತ್ತಮ ಖಾತೆ ಪಡೆಯುವ ಉದ್ದೇಶದಿಂದ ಈ ರೀತಿಯ ತುಚ್ಛ ಹೇಳಿಕೆಯನ್ನು ನೀಡಿ ಸರ್ಕಾರಕ್ಕೆ ಕೆಟ್ಟ ಹೆಸರು ತರುತ್ತೇವೆ ಎಂಬ ಸಂದೇಶವನ್ನು ನೀಡಿ ಯಡಿಯೂರಪ್ಪರನ್ನು ಬ್ಲಾಕ್ಮೇಲ್ ಮಾಡಲು ಕನ್ನಡಪರ ಹೋರಾಟಗಾರರ ಬಗ್ಗೆ ಅಸಂಬದ್ಧ ಹೇಳಿಕೆ ನೀಡಿದ ಯತ್ನಾಳ್ ಒಬ್ಬ ನಾಡದ್ರೋಹಿ ಎಂದು ಗುಡುಗಿದರು.

ಈ ವಿಷಯದಲ್ಲಿ ಕನ್ನಡಪರ ಹೋರಾಟಗಾರರು ನಾಡ ಎಲ್ಲಾ ರೀತಿಯ ಹೋರಾಟಗಾರರು ಎಲ್ಲ ಒಕ್ಕೂಟಗಳು ಒಂದಾಗಬೇಕು, ಯತ್ನಾಳ್ ಅಂತಹ ನಾಡದ್ರೋಹಿ , ಹರುಕುಬಾಯಿಯವರನ್ನು ಮುಂದಿನ ದಿನಗಳಲ್ಲಾದರೂ ದೂರ ಇಡಬೇಕು ಎಂಬುದನ್ನು ತಿಳಿಯಬೇಕು , ದೇಶದ ಬಗ್ಗೆ ಸ್ವತಂತ್ರ ಹೋರಾಟಗಾರರ ಬಗ್ಗೆ ಮಾತನಾಡಿದರೆ ಯಾವ ಶಿಕ್ಷೆ ಇದೆಯೋ ಅದೇ ರೀತಿ ನಾಡ ಬಗ್ಗೆ ನಾಡ ಹೋರಾಟಗಾರರ ಬಗ್ಗೆ ಮಾತನಾಡಿದ ಯತ್ನಾಳ್ ಸದಸ್ಯತ್ವ ರದ್ದುಗೊಳಿಸಬೇಕು ಅವರ ವಿರುದ್ಧ ದೂರು ದಾಖಲಿಸಬೇಕು ಎಂದು ಆಗ್ರಹಿಸಿದರು.

Edited By : Manjunath H D
Kshetra Samachara

Kshetra Samachara

20/11/2020 10:05 pm

Cinque Terre

14.03 K

Cinque Terre

4

ಸಂಬಂಧಿತ ಸುದ್ದಿ