ಬಂಟ್ವಾಳ: ಕಾಂಗ್ರೆಸ್ ಪಕ್ಷ ಹಾಗೂ ನಾಯಕರಾದ ಬಿ.ರಮಾನಾಥ ರೈ ವಿರುದ್ಧ ಹೇಳಿಕೆ ನೀಡುವ ಮೂಲಕ ಬಿಜೆಪಿ ಮುಖಂಡ ಕೆ.ಹರಿಕೃಷ್ಣ ಬಂಟ್ವಾಳ್ ಗೊಂದಲದ ವಾತಾವರಣ ಸೃಷ್ಟಿ ಮಾಡುತ್ತಿದ್ದಾರೆ. ರಾಜಧರ್ಮ ಪಾಲಿಸುತ್ತೇನೆ ಎನ್ನುವ ಶಾಸಕರು ತನ್ನ ಪಕ್ಷದವರೇ ಕಾಂಗ್ರೆಸ್ ನ ಪುರಸಭೆ ಸದಸ್ಯರನ್ನು ಸೆಳೆದವರ ಕುರಿತು ಅರಿತುಕೊಳ್ಳಲಿ ಎಂದು ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ನವಾಜ್ ಹೇಳಿದ್ದಾರೆ.
ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಯುವ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಪ್ರಶಾಂತ್ ಕುಲಾಲ್ ಜೊತೆ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಕ್ಷೇಪಾರ್ಹ ಹೇಳಿಕೆ ನೀಡಿರುವುದರ ಕುರಿತು ಈಗಾಗಲೇ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ಇದರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದೇವೆ. ರಮಾನಾಥ ರೈ ತಮ್ಮ ಅವಧಿಯಲ್ಲಿ ಮಾಡಿದ ಅಭಿವೃದ್ಧಿ ಕಾರ್ಯ ಏನೆಂಬುದು ಜನರಿಗೆ ಗೊತ್ತಿದೆ. ಬಿಜೆಪಿ ಜಿಲ್ಲಾ ಯುವಮೋರ್ಚಾ ಸುದರ್ಶನ ಬಜ ಆರೋಪ ಮಾಡುವ ಮೊದಲು ರೈ ನಡೆಸಿದ ಅಭಿವೃದ್ಧಿ ಕಾರ್ಯ ಕುರಿತು ಅರಿತುಕೊಳ್ಳಲಿ ಎಂದರು.
ಸುದ್ದಿಗೋಷ್ಠಿಯಲ್ಲಿ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕುಲಾಲ್, ಪ್ರಮುಖರಾದ ಆಲ್ವಿನ್ ಪ್ರಶಾಂತ್, ಸುರೇಶ್ ಪೂಜಾರಿ, ಪವನ್ ಆಳ್ವ, ವಿನಯ್ ಕುಮಾರ್, ಸುಧೀಂದ್ರ ಶೆಟ್ಟಿ, ಶಫೀಕ್, ಅಂಕುಶ್ ಶೆಟ್ಟಿ, ವಿಶ್ವಜಿತ್, ಗಣೇಶ್ ಪೂಜಾರಿ ಇದ್ದರು.
Kshetra Samachara
15/11/2020 04:05 pm