ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ : ಸರಕಾರದಿಂದ ವಿಶ್ವಕರ್ಮ ಸಮುದಾಯಕ್ಕೆ ನಿರೀಕ್ಷಿತ ರಾಜಕೀಯ ಪ್ರಾತಿನಿಧ್ಯ ಸಿಕ್ಕಿಲ್ಲ:ವಿಶ್ವಕರ್ಮ ಮುಖಂಡರು

ಉಡುಪಿ: ವಿಶ್ವಕರ್ಮ ಸಮುದಾಯ ಕೆಲವು ವರ್ಷಗಳಿಂದ ಬಿಜೆಪಿಯನ್ನು ಬೆಂಬಲಿಸುತ್ತಿದೆ.ಇದೀಗ ನಮ್ಮದೇ ಬಿಜೆಪಿ ಸರಕಾರ ಇದೆ.ಆದರೆ ವಿಶ್ವಕರ್ಮ ಸಮುದಾಯಕ್ಕೆ ಸರ್ಕಾರದಿಂದ ರಾಜಕೀಯ ಪ್ರಾತಿನಿಧ್ಯ ನಮ್ಮ ನಿರೀಕ್ಷೆಯಷ್ಟು ಸಿಕ್ಕಿಲ್ಲ ಎಂದು ವಿಶ್ವಕರ್ಮ ಸಮುದಾಯದ ಮುಖಂಡರು ಹೇಳಿದ್ದಾರೆ ಉಡುಪಿಯಲ್ಲಿ ಹೇಳಿದ್ದಾರೆ.

ಉಡುಪಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ವಿಶ್ವಕರ್ಮ ಸಮುದಾಯದ ಮುಖಂಡರು ನಮ್ಮ ನಾಯಕರಾದಂತಹ ಕೆ.ಪಿ.ನಂಜುಂಡಿ ಅವರು ಕಳೆದ ಇಪ್ಪತ್ತು ವರ್ಷಗಳಿಂದ ಸಮುದಾಯವನ್ನು ಸಂಘಟಿಸುವುದರ ಜೊತೆಗೆ ಬಿಜೆಪಿ ಪಕ್ಷವನ್ನು ಸದೃಢ ಮಾಡುವಲ್ಲಿ ಕ್ಷಮಿಸಿದ್ದಾರೆ. ಅನೇಕ ಕಾರ್ಯಕ್ರಮಗಳು ,ಪಾದಯಾತ್ರೆ, ಹೋರಾಟಗಳನ್ನು ಮಾಡಿದ್ದಾರೆ. ಆದರೂ ಕೂಡ ನಮ್ಮ ಸಮುದಾಯಕ್ಕೆ ಸರಕಾರ ನಿರೀಕ್ಷಿತ ರೀತಿಯ ಸಹಾಯ ಮಾಡಿಲ್ಲ ಎಂದು ಮುಖಂಡರು ಹೇಳಿದ್ದಾರೆ.

ಇದೇ ವೇಳೆ ಮಾತನಾಡಿದ ಮುಖಂಡರು, ಉಡುಪಿ ಜಿಲ್ಲೆಯ ಕೆಲ ಭಾಗದಲ್ಲಿ ನಮ್ಮ ಸಮುದಾಯದ ಜನರು ಮತಾಂತರ ಗೊಳ್ಳುತ್ತಿದ್ದಾರೆ. ಇದಕ್ಕೆ ಬೇರೆ ಬೇರೆ ಕಾರಣಗಳಿವೆ.ಯಾವುದೇ ಕಾರಣಕ್ಕೂ ಮತಾಂತರ ಆಗಬೇಡಿ ಎಂದು ವಿಶ್ವಕರ್ಮ ಮುಖಂಡರು ಮನವಿ ಮಾಡಿದ್ದಾರೆ. ನಮ್ಮ ಸಮುದಾಯದ ಶೈಕ್ಷಣಿಕ ,ಆರ್ಥಿಕ ಮತ್ತು ಸರ್ವತೋಮುಖ ಅಭಿವೃದ್ಧಿಗೆ ಸರ್ಕಾರದಿಂದ ಸಹಾಯ ಬೇಕಾಗಿದೆ. ಮುಂದಿನ ದಿನಗಳಲ್ಲಿ ಸಮುದಾಯವನ್ನು ಸಂಘಟಿಸಿ ರಾಜ್ಯಾದ್ಯಂತ ಸಮುದಾಯದ ಏಳಿಗೆಗೆ ಶ್ರಮಿಸುವುದಾಗಿ ಮುಖಂಡರು ಹೇಳಿದರು.

Edited By : Nagesh Gaonkar
Kshetra Samachara

Kshetra Samachara

07/11/2020 01:10 pm

Cinque Terre

9.86 K

Cinque Terre

0

ಸಂಬಂಧಿತ ಸುದ್ದಿ