ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಬಿಜೆಪಿ ಸಭೆಯಲ್ಲಿ ಅಭಿವೃದ್ಧಿ ಬಗ್ಗೆ ಏನು ಚರ್ಚೆ ನಡೆಯಿತು..?: ಖಾದರ್

ಮಂಗಳೂರು: ಮಂಗಳೂರಲ್ಲಿ ನಿನ್ನೆ ನಡೆದ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಅಭಿವೃದ್ಧಿ ಬಗ್ಗೆ ಏನು ಚರ್ಚೆ ನಡೆಯಿತು..? ಎಂದು ಮಾಜಿ ಸಚಿವ ಯು.ಟಿ. ಖಾದರ್ ಪ್ರಶ್ನೆ ಮಾಡಿದ್ದಾರೆ. ಮಂಗಳೂರಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಸಭೆಯಲ್ಲಿ ಯುವಕರಿಗೆ ಉದ್ಯೋಗ ನೀಡುವ ವಿಚಾರದಲ್ಲಿ ಏನು ಚರ್ಚೆ ನಡೆಯಿತು..?ರಾಜಕೀಯ ಚರ್ಚೆ ನಡೆಸಲು ಇಲ್ಲಿ ಸಭೆ ನಡೆಸಬೇಕಿತ್ತೇ..? ಎಂದು ಪ್ರಶ್ನಿಸಿದರು.

ಸಭೆ ಹೆಸರಲ್ಲಿ ಯಾಕೆ ಜನರನ್ನು ಮೋಸ ಮಾಡುತ್ತಿದ್ದೀರಿ..? ಜನರ ಕಣ್ಣಿಗೆ ಮಣ್ಣೆರಚುವ ಪ್ರಯತ್ನ ಮಾಡಿದ್ದಾರೆ ಎಂದು ಆರೋಪಿಸಿದ ಅವರು, ಜನರಿಗೆ ಸಭೆಯಿಂದ ಏನೂ ಉಪಯೋಗವಾಗಿಲ್ಲ. ಜನರ ಬೇಡಿಕೆಗಳನ್ನು ಈಡೇರಿಸುವ ಪ್ರಯತ್ನ ಆಗಿದೆಯಾ..?ದುಡಿಯುವ ವರ್ಗಕ್ಕೆ ಏ‌ನಾದರೂ ಲಾಭ ಸಿಗುತ್ತಾ..? ಜನರ ನಿರೀಕ್ಷೆ ಹುಸಿಯಾಗಿದೆ. ಜನರಿಗೆ ದ್ರೋಹ ಮಾಡಿದ್ದಾರೆ ಎಂದರು.

ಇನ್ನು ಜನಪರವಾದ ಯೋಜನೆಗಳನ್ನು ಜಾರಿ ತಂದಿಲ್ಲ. ಭಾವನಾತ್ಮಕವಾಗಿ ಬಲೆ ಬೀಳಿಸಿ ಮೋಸ ಮಾಡಲಾಗುತ್ತಿದೆ. ಜನರ ದಾರಿ ತಪ್ಪಿಸಲು ಬಿಜೆಪಿ ಬಳಿ ಅಸ್ತ್ರ ಖಾಲಿಯಾಗಿದೆ. ಹೀಗಾಗಿ ಗ್ರಾ ಪಂ ಚುನಾವಣೆಯಲ್ಲಿ ಜನರು ಪಾಠ ಕಲಿಸುತ್ತಾರೆ. ದೀಪಾವಳಿ ಬರುವಾಗ ಯಾಕೆ ಪಟಾಕಿ ನಿಷೇಧ ಆಗಿಲ್ಲ..?, ಸರ್ಕಾರಕ್ಕೆ ಏನಾಗಿದೆ? ಜನರ ಭಾವನೆಗಳನ್ನು ಸರ್ಕಾರ ಅರ್ಥ ಮಾಡುತ್ತಿಲ್ಲ. ಕಾನೂನು ಜಾರಿಗೆ ತರುತ್ತೇವೆ ಎನ್ನುವ ಹಿಂದೆ ದುರುದ್ದೇಶ ಇದೆ. ಯಾವುದೇ ಕಾನೂನು ಮಾಡುವಾಗ ಒಳ್ಳೆಯ ಉದ್ದೇಶ ಇರಬೇಕು. ಬೇರೆ ಬೇರೆ ವಿಚಾರದಲ್ಲಿ ಭಾವನಾತ್ಮಕವಾಗಿ ಕೆರಳಿಸುವುದು ಎಷ್ಟು ಸರಿ..?ಸರಿಯಾಗಿ ವೃದ್ಧಾಪ್ಯ ವೇತನ, ಆಹಾರ, ಚಿಕಿತ್ಸೆ ಸಿಗುತ್ತಿದೆಯಾ.?ಕಾಲೇಜು ಆರಂಭಿಸಬೇಕೇ ಎಂಬ ವಿಚಾರದಲ್ಲಿ ಗೊಂದಲ ಇನ್ನೂ ಇದೆ. ಕಾನೂನು ಜಾರಿ ಮಾಡುವ ಮುಂಚೆ ಪುನರ್ ವಿಮರ್ಶಿಸಬೇಕು ಎಂದರು.

Edited By : Nagesh Gaonkar
Kshetra Samachara

Kshetra Samachara

06/11/2020 08:04 pm

Cinque Terre

19.9 K

Cinque Terre

12

ಸಂಬಂಧಿತ ಸುದ್ದಿ