ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಡ್ರಗ್ಸ್, ಮತಾಂತರ ವಿರುದ್ಧ ಕಠಿಣ ಕಾನೂನು ಕ್ರಮ; ಸಿಎಂ ಖಡಕ್ ನುಡಿ

ಮಂಗಳೂರು: ಲವ್ ಜಿಹಾದ್ ಸಂಬಂಧಿಸಿ ರಾಜ್ಯದ ಅಧಿಕಾರಿಗಳ ಜೊತೆ ಚರ್ಚೆ ಮಾಡಿದ್ದೇನೆ. ಬೇರೆ ರಾಜ್ಯದಲ್ಲಿ ಏನಾಗಿದೆಯೋ ಗೊತ್ತಿಲ್ಲ, ನಮ್ಮಲ್ಲಿ ಆಗಲು ಬಿಡಲ್ಲ. ಕಿರಿ ವಯಸ್ಸಿನ ಹೆಣ್ಮಕ್ಕಳ ತಲೆ ಕೆಡಿಸಿ ಮತಾಂತರ ಮಾಡಲಾಗ್ತಿದೆ.

ಈ ನಿಟ್ಟಿನಲ್ಲಿ ಕಠಿಣ ಕಾನೂನು ತರಲು ಚಿಂತನೆ ನಡೆಸಿದ್ದೇವೆ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ. ಡ್ರಗ್ಸ್ ಮಾಫಿಯಾ ಮಟ್ಟ ಹಾಕಲು ರಾಜ್ಯ ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದೆ ಎಂದು ಮಂಗಳೂರಲ್ಲಿ‌ ನಡೆದ ಬಿಜೆಪಿ ಕಾರ್ಯಕಾರಿಣಿಯಲ್ಲಿ ಸಿಎಂ ಯಡಿಯೂರಪ್ಪ ಗುಡುಗಿದರು.

ಡ್ರಗ್ಸ್ ಮಾಫಿಯಾ ಮಟ್ಟ ಹಾಕಲು ಸರ್ಕಾರ ಇನ್ನಷ್ಟು ಬಿಗಿ ಕ್ರಮ ಕೈಗೊಂಡಿದೆ. ವಿದ್ಯಾರ್ಥಿಗಳು, ಮಕ್ಕಳ ಹಿತದೃಷ್ಟಿಯಿಂದ ಯಾವುದೇ ಮುಲಾಜಿಲ್ಲದೆ ಇನ್ನಷ್ಟು ಕ್ರಮಕ್ಕೆ ಮುಂದಾಗಿದ್ದೇವೆ. ರಾಜ್ಯದ ಕರಾವಳಿ ಭಾಗದ ಆಂತರಿಕ ಭದ್ರತೆಗೂ ಹೆಚ್ಚಿನ ಒತ್ತು ನೀಡಿದ್ದೇವೆ ಎಂದರು.

ಇನ್ನು ಕಡಲ ಅಲೆಗಳಿಂದ ವಿದ್ಯುತ್ ಉತ್ಪಾದನೆಗೆ ಸರ್ಕಾರ ಪ್ರೋತ್ಸಾಹ ನೀಡುತ್ತದೆ. ಉದ್ಯೋಗವಕಾಶದ ದೃಷ್ಟಿಯಿಂದ ಸರ್ಕಾರ ಯೋಜನೆ ಹಾಕಿಕೊಂಡಿದೆ. ಸಾಕಷ್ಟು ಕಂಪೆನಿಗಳು ರಾಜ್ಯದಲ್ಲಿ ಬಂಡವಾಳ ಹೂಡುತ್ತಿರೋದು ಸಂತಸದ ವಿಚಾರ. ಇನ್ನು

ಇನ್ನಷ್ಟೂ ತಿಂಗಳು ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ.‌

ಇನ್ನೆರಡು ತಿಂಗಳಲ್ಲಿ ರಾಜ್ಯದ ಹಣಕಾಸು ಸ್ಥಿತಿಯೂ ಸುಧಾರಿಸಲಿದೆ. ಮುಂದಿನ ಗ್ರಾಪಂ ಸೇರಿ ಇತರ ಚುನಾವಣೆ ಬಿಜೆಪಿ ಗೆಲ್ಲಬೇಕಿದೆ. ಅಧ್ಯಕ್ಷರ ಜೊತೆ ಸೇರಿ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡ್ತೇವೆ. ನಳಿನ್ ಅವರು ಈ ರೀತಿ ಕೆಲಸ ಮಾಡ್ತಾರೆ ಅನ್ನೋದನ್ನ ನಿರೀಕ್ಷೆ ಮಾಡಿರಲಿಲ್ಲ. ಆದರೆ, ಅವರು ಉತ್ತಮ ಕೆಲಸ ಮಾಡಿ ಗೆದ್ದಿದ್ದಾರೆ ಎಂದರು.

Edited By : Manjunath H D
Kshetra Samachara

Kshetra Samachara

05/11/2020 09:25 pm

Cinque Terre

10.31 K

Cinque Terre

4

ಸಂಬಂಧಿತ ಸುದ್ದಿ