ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ:"ಸಂಘಟನೆಗಳನ್ನು ಬಲಪಡಿಸುವುದರ ಜೊತೆಗೆ ಕೃಷಿಗೆ ಪ್ರೋತ್ಸಾಹ ನೀಡುತ್ತಿರುವ ಕಾರ್ಯ ಅಭಿನಂದನೀಯ"

ಮುಲ್ಕಿ: ಭಂಡಾರಿ ಸಮಾಜ (ರಿ) ಪಡುಬಿದ್ರೆ ಮತ್ತು ಮುಲ್ಕಿ ವಲಯದ ವತಿಯಿಂದ ಶಿಮಂತೂರು ದೇವಸ್ಥಾನದ ಬಳಿ ಕೆಸರ್ದ ಗೊಬ್ಬುಲು ಹಾಗೂ ಆಟಿದ ಕೂಟ ನಡೆಯಿತು.

ಕಾರ್ಯಕ್ರಮವನ್ನು ಕುತ್ಯಾರು ಸೂರ್ಯ ಚೈತನ್ಯ ಗ್ಲೋಬಲ್ ಅಕಾಡೆಮಿಕ್ ಸ್ಕೂಲ್ ನ ಅಧ್ಯಕ್ಷರಾದ ವಿದ್ವಾನ್ ಶಂಭುದಾಸ್ ಗುರೂಜಿ ಹಿಂಗಾರ ಅರಳಿಸಿ ಉದ್ಘಾಟಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರಿ ಸಮಾಜ (ರಿ)ನ ಅಧ್ಯಕ್ಷ ಚಂದ್ರಶೇಖರ ಭಂಡಾರಿ ವಹಿಸಿದ್ದರು. ಕಾರ್ಯಕ್ರಮಕ್ಕೆ ದೀಪ ಬೆಳಗಿಸಿ ಚಾಲನೆ ನೀಡಿ ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ, ಹಿಂದಿನ ಕಾಲದ ಕೆಸರಿನ ಆಟ ಹಾಗೂ ಆಟಿಯ ಕೂಟಗಳ ಮೂಲಕ ಸಂಘಟನೆಗಳನ್ನು ಬಲಪಡಿಸುವುದರ ಜೊತೆಗೆ ಕೃಷಿಗೆ ಪ್ರೋತ್ಸಾಹ ನೀಡುತ್ತಿರುವ ಕಾರ್ಯ ಅಭಿನಂದನೀಯ ಎಂದರು.

ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಅತಿಕಾರಿಬೆಟ್ಟು ಗ್ರಾ.ಪಂ. ಮನೋಹರ ಕೋಟ್ಯಾನ್, ಸದಸ್ಯ ಕೃಷ್ಣ ಶೆಟ್ಟಿಗಾರ್,ಶ್ರೀ ಕಚ್ಚೂರು ನಾಗೇಶ್ವರ ದೇವಸ್ಥಾನ ಸೇವಾ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಶ್ರೀಧರ ಭಂಡಾರಿ, ಮಾಜಿ ತಾ.ಪಂ.ಸದಸ್ಯ ಶರತ್ ಭಂಡಾರಿ, ಸದಾಶಿವ ಗುಜರನ್ ಕುಬೆವೂರು, ಬಿಲ್ಲವ ಮಹಾ ಮಂಡಲದ ಪ್ರಧಾನ ಕಾರ್ಯದರ್ಶಿ ವಿಜಯಕುಮಾರ್,ಪುನರೂರು ಪ್ರತಿಷ್ಠಾನದ ಅಧ್ಯಕ್ಷ ದೇವಪ್ರಸಾದ್ ಪುನರೂರು, ಮಂಡಲಾಧ್ಯಕ್ಷ ಸುನಿಲ್ ಆಳ್ವ,ಮಾಜಿ ಜಿ.ಪಂ.ಸದಸ್ಯ ವಿನೋದ್, ಲ.ವೆಂಕಟೇಶ ಹೆಬ್ಬಾರ್, ಉದ್ಯಮಿಶ್ರೀಧರ್ ಭಂಡಾರಿ ಕದ್ರಿ, ಕಾರ್ಯದರ್ಶಿ ಮಮತಾ ನಾರಾಯಣ ಭಂಡಾರಿ ಪಡುಬಿದ್ರೆ, ಕೋಶಾಧಿಕಾರಿ ಸುಮಾ ಶಿವರಾಮ್ ಭಂಡಾರಿ ಮುದರಂಗಡಿ ಮತ್ತಿತರರು ಉಪಸ್ಥಿತರಿದ್ದರು. ತನಿಷಾ ಸ್ವಾಗತಿಸಿದರು, ಜಯಕುಮಾರ್ ಕುಬೆವೂರು ನಿರೂಪಿಸಿದರು. ಬಳಿಕ ಕೆಸರುಗದ್ದೆಯಲ್ಲಿ ವಿವಿಧ ಕ್ರೀಡಾಕೂಟ ಹಾಗೂ ಆಟಿದ ಕೂಟ ನಡೆಯಿತು.

Edited By :
Kshetra Samachara

Kshetra Samachara

09/08/2022 03:03 pm

Cinque Terre

3.24 K

Cinque Terre

0

ಸಂಬಂಧಿತ ಸುದ್ದಿ