ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಕುತ್ಪಾಡಿಯಲ್ಲಿ ಭತ್ತದ ಚಾಪೆ ನೇಜಿ ತಯಾರಿಕಾ ಘಟಕ

ಉಡುಪಿ : ಉಡುಪಿಯ ಕುತ್ಪಾಡಿಯಲ್ಲಿ ಭತ್ತದ ಚಾಪೆ ನೇಜಿ ತಯಾರಿಕಾ ಘಟಕವನ್ನು ಶಾಸಕ ರಘುಪತಿ ಭಟ್ ಉದ್ಘಾಟಿಸಿದರು. ದೀಪ ಬೆಳಗಿ ಭತ್ತದ ಕಳಸಿಗೆ ಆರತಿ ಬೆಳಗುವ‌‌ ಮೂಲಕ ನೂತನ ಘಟಕಕ್ಕೆ ಚಾಲನೆ ನೀಡಲಾಯಿತು.

ಕೇದಾರೋತ್ಥಾನ ಟ್ರಸ್ಟ್ ನ ವತಿಯಿಂದ ಮೊದಲ ವರ್ಷದಲ್ಲಿ ಆರಂಭವಾದ ಹಡಿಲು ಭೂಮಿ ಕೃಷಿ ಕಾರ್ಯಕ್ರಮಕ್ಕೆ ಉತ್ತಮ ಜನ ಸ್ಪಂದನೆ ಜೊತೆಗೆ ಭತ್ತದ ಕೃಷಿಕರ ಬೆಂಬಲಕ್ಕೆ ಪಾತ್ರವಾದ ಕಾರ್ಯಕ್ಕೆ ಇನ್ನಷ್ಟು ಬಲ ನೀಡುವ ನಿಟ್ಟಿನಲ್ಲಿ ಈ ಘಟಕ ಪ್ರಾರಂಭಿಸಲಾಗಿದೆ.

ಕೇದಾರೋತ್ಥಾನ ಟ್ರಸ್ಟ್, ಕೇದಾರೋತ್ಥಾನ ರೈತ ಉತ್ಪಾದಕರ ಕಂಪನಿ ವತಿಯಿಂದ ಈ ಘಟಕದ ಮುಂದಾಳತ್ವ ವಹಿಸಿದೆ. ಕೇದಾರೋತ್ಥಾನ ಟ್ರಸ್ಟ್ ನ ಅಧ್ಯಕ್ಷರು ಆಗಿರುವ ಶಾಸಕ ರಘುಪತಿ ಭಟ್ ಹೆಚ್ಚಿನ ಮುತುವರ್ಜಿ ವಹಿಸಿ ಹಡಿಲು ಭೂಮಿ ಕೃಷಿ ಮುಂದಾಳತ್ವ ವಹಿಸುವುದರ ಜೊತೆಗೆ ಖುದ್ದು ಕೃಷಿಗೆ ಇಳಿದಿರುವುದು ಕೂಡ ಕಾರ್ಯಕ್ರಮದ ಜನಪ್ರಿಯತೆಗೆ ಕಾರಣವಾಗಿದೆ.

Edited By : Manjunath H D
Kshetra Samachara

Kshetra Samachara

24/05/2022 02:54 pm

Cinque Terre

3.7 K

Cinque Terre

0

ಸಂಬಂಧಿತ ಸುದ್ದಿ