ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಮಾ.11-13 ಕೊಲ್ನಾಡಿನಲ್ಲಿ ರಾಜ್ಯಮಟ್ಟದ ಕೃಷಿ ಮೇಳ: ಉಮಾನಾಥ್ ಕೋಟ್ಯಾನ್

ಮುಲ್ಕಿ: ಮಾರ್ಚ್ 11ರಿಂದ 13ರವರೆಗೆ ಮೂಲ್ಕಿ ಬಳಿಯ ಕೊಲ್ನಾಡಿನಲ್ಲಿ ರಾಜ್ಯಮಟ್ಟದ ಕೃಷಿ ಮೇಳ-2022 ನಡೆಯಲಿದೆ ಎಂದು ಮೂಲ್ಕಿ ಮೂಡಬಿದ್ರೆ ಕ್ಷೇತ್ರ ಶಾಸಕ ಉಮಾನಾಥ್ ಕೋಟ್ಯಾನ್ ಮಾಧ್ಯಮದ ಮುಂದೆ ಮಾಹಿತಿ ನೀಡಿದರು.

ಕೃಷಿ ಮೇಳ ನಡೆಯುವ ಸ್ಥಳದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತಾಡಿದ ಅವರು, "ಕೃಷಿ ಕ್ಷೇತ್ರಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಸಾರ್ವಜನಿಕರು ಹಾಗೂ ಸಾಮಾಜಿಕ ಸಂಘಟನೆಗಳ ಸಹಭಾಗಿತ್ವದಲ್ಲಿ ಕೃಷಿ ಮೇಳ ಹಮ್ಮಿಕೊಳ್ಳಲಾಗಿದೆ. ಕೃಷಿ ಸಚಿವ ಬಿ.ಸಿ. ಪಾಟೀಲ್, ಸಂಸದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ವಿನಯ ಕೃಷಿ ಬೆಳೆಗಾರರ ಸಂಘ ಹಾಗೂ ಪ್ರಣವ ಸೌಹಾರ್ದ ಸಹಕಾರಿ ನಿಯಮಿತ ಇದರ ಆಶ್ರಯದಲ್ಲಿ ಮೇಳ ಜರುಗಲಿದ್ದು ಮೂರು ದಿನಗಳ ಕಾಲ ಕೃಷಿಗೆ ಸಂಬಂಧಪಟ್ಟ ಪ್ರದರ್ಶನ, ವಿಚಾರಗೋಷ್ಠಿಗಳು ಜರುಗಲಿದೆ. ಸುಮಾರು 12 ಎಕ್ರೆ ಜಾಗದಲ್ಲಿ ಕೃಷಿ ಮೇಳ ನಡೆಯಲಿದ್ದು ಸಾರ್ವಜನಿಕರಿಗಾಗಿ 200 ಕೌಂಟರ್ ಗಳನ್ನು ತೆರೆದು ಕೃಷಿ ಸಂಬಂಧಿತ ಉತ್ಪನ್ನಗಳ ಪ್ರದರ್ಶನ ಹಾಗೂ ಆಹಾರ, ಪಾನೀಯ ವ್ಯವಸ್ಥೆ ಕಲ್ಪಿಸಲಾಗುವುದು" ಎಂದರು.

ಬಿಜೆಪಿ ನಾಯಕ ಗುರ್ಮೆ ಸುರೇಶ್ ಶೆಟ್ಟಿ, ಕೃಷಿ ಮೇಳದ ಅಧ್ಯಕ್ಷ ವಿಜಯಕುಮಾರ್ ಶೆಟ್ಟಿ ಮಾತನಾಡಿದರು

ಈ ಸಂದರ್ಭ ಕೃಷಿಮೇಳದ ಪದಾಧಿಕಾರಿಗಳು ಉಪಸ್ಥಿತರಿದ್ದರು.

Edited By : Nagesh Gaonkar
Kshetra Samachara

Kshetra Samachara

05/03/2022 10:34 pm

Cinque Terre

6.05 K

Cinque Terre

0

ಸಂಬಂಧಿತ ಸುದ್ದಿ