ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ದೇಶದ ಅವೈಜ್ಞಾನಿಕ ಕೃಷಿ ಪದ್ಧತಿ ಭೂಮಿಯನ್ನು ಬರಡಾಗಿಸುತ್ತಿದೆ - ಎಚ್‌.ಎನ್.ನಾಗಮೋಹನ್ ದಾಸ್

ಮಂಗಳೂರು: ಆಹಾರದ ವಿಚಾರದಲ್ಲಿ ಭಾರತ ದೇಶ ಸ್ವಾವಲಂಬನೆಯತ್ತ ಸಾಗುತ್ತಿದ್ದು, ಆಮದು ಮಾಡಿಕೊಳ್ಳುವುದನ್ನು ಕಡಿಮೆ ಮಾಡಿದ್ದೇವೆ. ಕೃಷಿ ಉತ್ಪಾದನೆಗಳನ್ನು ರಫ್ತು ಮಾಡುವ ಪರಿಸ್ಥಿತಿಯಲ್ಲಿ ನಾವಿದ್ದೇವೆ ಎಂದು ನಿವೃತ್ತ ಉಚ್ಛ ನ್ಯಾಯಾಧೀಶ ಎಚ್‌.ಎನ್.ನಾಗಮೋಹನ್ ದಾಸ್ ಹೇಳಿದರು. ರಾಜ್ಯ ರೈತ ಸಂಘಟನೆಯ ವತಿಯಿಂದ ನಗರದ ಪುರಭವನದಲ್ಲಿ ನಡೆದ ರಾಜ್ಯ ಮಟ್ಟದ ವಿಚಾರಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ರೀತಿಯ ಪರಿಸ್ಥಿತಿಗೆ ಭಾರತ ದೇಶ ತಲುಪಲು ಈ ದೇಶದ ಬೆನ್ನೆಲುಬಾಗಿರುವ ರೈತ ಸಮುದಾಯ ಕಾರಣ ಎಂದು ಹೇಳಿದರು.

ದೇಶದಲ್ಲಿ ಕೃಷಿ ಉತ್ಪಾದನೆ ಹೆಚ್ಚಾಗುತ್ತಿದ್ದಂತೆ ಹಸಿವು, ಬಡತನ ಕಡಿಮೆಯಾಯಿತು. ಆದರೆ ವಿಜ್ಞಾನದ ಸಾಧನಗಳನ್ನು ಅವೈಜ್ಞಾನಿಕವಾಗಿ ಬಳಕೆ ಮಾಡಿರುವ ಪರಿಣಾಮ ಭೂಮಿ ಬರಡಾಗುತ್ತಿದೆ. ಫಲವತ್ತತೆಯನ್ನು ಕಳೆದುಕೊಳ್ಳುತ್ತಿದೆ. ಮುಳ್ಳುಗಿಡಗಳು ಹೊಲಗಳಲ್ಲಿ ಬೆಳೆಯದಷ್ಟು ಬರಡಾಗುತ್ತಿದೆ. ನೀರು ಪಾತಾಳಕ್ಕೆ ಇಳಿದಿದೆ. ಈ ರೀತಿಯಲ್ಲಿ ಸಿಗುವ ನೀರು ಕೂಡಾ ಶುದ್ಧ ನೀರಲ್ಲ ಎಂದು ಖೇದ ವ್ಯಕ್ತಪಡಿಸಿದರು.

Edited By : Nagesh Gaonkar
Kshetra Samachara

Kshetra Samachara

18/02/2022 06:47 pm

Cinque Terre

14.84 K

Cinque Terre

0

ಸಂಬಂಧಿತ ಸುದ್ದಿ