ಮುಲ್ಕಿ: ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರಕಾರ ಎಲ್ಲಾ ರಂಗಗಳಲ್ಲೂ ಸಂಪೂರ್ಣ ವಿಫಲಗೊಂಡಿದೆ ಎಂದು ಕೆಪಿಸಿಸಿ ಕೋ-ಆರ್ಡಿನೇಟರ್ ಎಚ್. ವಸಂತ ಬರ್ನಾಡ್ ಆರೋಪಿಸಿದ್ದಾರೆ. ಅವರು ಮಂಗಳೂರಿನ ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಯಡಿಯೂರಪ್ಪ ನೇತೃತ್ವದ ಸರಕಾರ ಬಂದ ಮೇಲೆ ಗ್ರಾಮೀಣ ಪ್ರದೇಶದಲ್ಲಿ ಬಡಜನತೆಗೆ ಆಗುತ್ತಿರುವ ತೊಂದರೆ ಬಗ್ಗೆ ಪ್ರಸ್ತಾಪಿಸಿ ಕಳೆದ ಆರೇಳು ತಿಂಗಳಿನಿಂದ ಬಡಜನರ ಸಂಧ್ಯಾ ಸುರಕ್ಷಾ, ವೃದ್ಧಾಪ್ಯ ವೇತನ, ಆಶಾ ಕಾರ್ಯಕರ್ತೆಯರ ವೇತನ ಸರಿಯಾಗಿ ಬರುತ್ತಿಲ್ಲ. ಅಲ್ಲದೆ, ಮಳೆ ಹಾನಿ ಪರಿಹಾರ ಇನ್ನೂ ಬಂದಿಲ್ಲ. ಕೊರೊನಾದಿಂದ ಸಂತ್ರಸ್ತರಾದ ಬಡಜನರು ಮೆಸ್ಕಾಂ ಬಿಲ್ ಕಟ್ಟದಿದ್ದರೆ ಸಂಪರ್ಕ ಕಡಿತಗೊಳಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬಿಜೆಪಿ ಸರಕಾರ ಗ್ರಾಪಂ ಚುನಾವಣೆ ಮುಂದೂಡಿ, ಹಿಂಬಾಗಿಲಿನಿಂದ ಗ್ರಾಪಂ ಆಡಳಿತ ಪಡೆದುಕೊಳ್ಳುವ ಹುನ್ನಾರ ನಡೆಸುತ್ತಿದೆ ಎಂದು ಆರೋಪಿಸಿದರು. ಸಿದ್ದರಾಮಯ್ಯ ಸರಕಾರದಲ್ಲಿ ಅಸ್ತಿತ್ವಕ್ಕೆ ಬಂದ ಬಾಪೂಜಿ ಕೇಂದ್ರಗಳ ಖಾಸಗೀಕರಣದ ವಿರುದ್ಧವೂ ವಾಗ್ದಾಳಿ ನಡೆಸಿದರು. ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ವಕ್ತಾರರಾದ ಮಹಮ್ಮದ್ ಬಡಗನ್ನೂರು, ಅಭಿಷೇಕ ಉಳ್ಳಾಲ್, ನೀರಜ್ ಪಾಲ್, ನಜೀರ್ ಬಜಾಲ್ , ಪ್ರೇಮನಾಥ್ ಬಲ್ಲಾಳ್ ಬಾಗ್ ಮೊದಲಾದವರಿದ್ದರು.
Kshetra Samachara
04/11/2020 03:14 pm