ಮಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್ ಅವರ ತವರೂರಲ್ಲಿ ಎರಡು ದಶಕಗಳ ಬಳಿಕ ನವೆಂಬರ್ 5 ರಂದು ಬಿಜೆಪಿ ಕಾರ್ಯಕಾರಿಣಿ ಸಭೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಕಡಲ ನಗರಿ ಮಂಗಳೂರು ಕೇಸರಿಮಯಗೊಂಡಿದೆ.
ನಗರದ ಪಿವಿಎಸ್ ನಲ್ಲಿರುವ ಬಿಜೆಪಿ ಕಚೇರಿ ವಿದ್ಯುತ್ ದೀಪಗಳಿಂದ ಶೃಂಗಾರಗೊಂಡಿದೆ. ಪ್ರಮುಖ ರಸ್ತೆಗಳು ಪ್ರಧಾನಿ ನರೇಂದ್ರ ಮೋದಿ, ಸಿಎಂ ಯಡಿಯೂರಪ್ಪ ಸೇರಿದಂತೆ ಬಿಜೆಪಿ ರಾಷ್ಟ್ರೀಯ ನಾಯಕರ ಕಟೌಟ್ ಗಳು , ಕೇಸರಿ ಬಂಟಿಂಗ್ಸ್ ನಿಂದ ರಾರಾಜಿಸುತ್ತಿದೆ. ರಾತ್ರಿ ಸಿಎಂ ಯಡಿಯೂರಪ್ಪ ಮಂಗಳೂರಿಗೆ ಅಗಮಿಸಿ ವಾಸ್ತವ್ಯ ಹೂಡಲಿದ್ದಾರೆ.ನೆ ಬೆಳ್ಳಗೆ 10 ಕ್ಕೆ ನಗರದ ನವಭಾರತ್ ಸರ್ಕಲ್ ನಲ್ಲಿರುವ ಟಿ.ವಿ.ರಮಣ ಪೈ ಸಭಾಂಗಣದಲ್ಲಿ ನಡೆಯುವ ಭಾರತೀಯ ಜನತಾ ಪಕ್ಷದ ರಾಜ್ಯ ವಿಶೇಷ ಸಭೆಯನ್ನು ಉದ್ಘಾಟಿಸಲಿದ್ದಾರೆ. ರಾಷ್ಟ್ರೀಯ ನಾಯಕರು, ಸಚಿವರುಗಳು, ಪಕ್ಷದ ವರಿಷ್ಠರು ಹಾಗೂ ಆಯ್ದ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಲಿದ್ದಾರೆ.
Kshetra Samachara
04/11/2020 08:18 am