ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಂಟ್ವಾಳ: ವಿಹಿಂಪ, ಬಜರಂಗದಳ ಗೋರಕ್ಷಣೆಗೆ ಬದ್ಧ: ಸರಪಾಡಿ ಅಶೋಕ ಶೆಟ್ಟಿ

ಬಂಟ್ವಾಳ: ವಿಹಿಂಪ-ಬಜರಂಗ ದಳವು ಗೋಸಾಗಾಟ ಸೇರಿದಂತೆ ಯಾವುದೇ ಅಕ್ರಮ ಚಟುವಟಿಕೆಗಳನ್ನು ತಡೆಯುವ ದೀಕ್ಷೆ ಪಡೆದ ಸಂಘಟನೆಯಾಗಿದೆ. ಸಂಘಟನೆಯ ಕಾರ್ಯಕರ್ತರ ಸಾಮಾಜಿಕ ಚಟುವಟಿಕೆಯನ್ನು ಹತ್ತಿಕ್ಕುವ ನಿಟ್ಟಿನಲ್ಲಿ ಕೆಲವೊಂದು ಅಪಪ್ರಚಾರ ಮಾಡಲಾಗುತ್ತಿದೆ ಎಂದು ವಿಹಿಂಪ ಜಿಲ್ಲಾ ಗೋರಕ್ಷಾ ಪ್ರಮುಖ್ ಸರಪಾಡಿ ಅಶೋಕ ಶೆಟ್ಟಿ ತಿಳಿಸಿದರು.

ಬಿ.ಸಿ.ರೋಡಿನ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲ್ಲಡ್ಕದಲ್ಲಿ ಗಂಡು ಕರುವೊಂದು ಬೀಡಾಡಿಯಾಗಿ ತಿರುಗಾಡುತ್ತಿದ್ದ ಸಂದರ್ಭ ರಕ್ಷಣೆ ಮಾಡುತ್ತಿದ್ದ ಸಂಘಟನೆ ಕಾರ್ಯಕರ್ತರ ಕುರಿತು ಅಪಪ್ರಚಾರ ಮಾಡಿ ಸಂಘಟನೆ ಹೆಸರು ಕೆಡಿಸಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.ಪತ್ರಿಕಾಗೋಷ್ಠಿಯಲ್ಲಿ ವಿಹಿಂಪ ವಿಟ್ಲ ಪ್ರಖಂಡ ಅಧ್ಯಕ್ಷ ಕ.ಕೃಷ್ಣಪ್ಪ, ಜಿಲ್ಲಾ ಬಜರಂಗ ದಳ ಸಹಸಂಚಾಲಕ್ ಗುರುರಾಜ್ ಬಂಟ್ವಾಳ್, ಗೋರಕ್ಷಾ ಪ್ರಮುಖ್ ಮಹೇಶ್ ಬಜತ್ತೂರು ಉಪಸ್ಥಿತರಿದ್ದರು.

Edited By : Nagesh Gaonkar
Kshetra Samachara

Kshetra Samachara

31/10/2020 05:23 pm

Cinque Terre

9.06 K

Cinque Terre

1

ಸಂಬಂಧಿತ ಸುದ್ದಿ