ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಪು ಪುರಸಭೆ ಅಧ್ಯಕ್ಷ ಗಾದಿ ಬಿಜೆಪಿ ತೆಕ್ಕೆಗೆ, ಉಪಾಧ್ಯಕ್ಷತೆ ಕಾಂಗ್ರೆಸ್ ಪಾಲು

ಕಾಪು : ಕಾಪು ಪುರಸಭೆ ಎರಡನೇ ಅವಧಿಯ ನೂತನ ಅಧ್ಯಕ್ಷರಾಗಿ ಬಿಜೆಪಿಯ ಅನಿಲ್ ಕುಮಾರ್ ಆಯ್ಕೆಯಾಗಿದ್ದು, ಉಪಾಧ್ಯಕ್ಷರಾಗಿ ಕಾಂಗ್ರೆಸ್ ನ ಮಾಲಿನಿ ಆಯ್ಕೆಯಾಗಿದ್ದಾರೆ.

ಕಾಪು ಪುರಸಭೆಯಲ್ಲಿ ತಹಸೀಲ್ದಾರ್ ಮುಹಮ್ಮದ್ ಇಸಾಕ್ ಬುಧವಾರ ಚುನಾವಣಾ ಪ್ರಕ್ರಿಯೆ ನಡೆಸಿದರು.ಕಾಪು ಪುರಸಭೆಯಲ್ಲಿ ಒಟ್ಟು 23 ಸದಸ್ಯ ಬಲ ಹೊಂದಿದ್ದು, ಕಾಂಗ್ರೆಸ್ 12, ಬಿಜೆಪಿಯ 11 ಮಂದಿ ಸದಸ್ಯರು ಇದ್ದಾರೆ. ಹಿಂದುಳಿದ ವರ್ಗ ಎ. ಮೀಸಲಾಗಿರುವ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ಅನಿಲ್ ಕುಮಾರ್, ಕಾಂಗ್ರೆಸ್ ನಿಂದ ಶಾಬು ಸಾಹೇಬ್ ಹಾಗೂ ಅಶ್ವಿನಿ ನಾಮಪತ್ರ ಸಲ್ಲಿಸಿದ್ದರು. ಅಂತಿಮವಾಗಿ ಅಶ್ವಿನಿ ನಾಮ ಪತ್ರ ಹಿಂಪಡೆದಿದ್ದಾರೆ. ಅನಿಲ್ ಕುಮಾರ್ ಹಾಗೂ ಶಾಬು ಸಾಹೇಬ್ ಕಣದಲ್ಲಿದ್ದು, ಸಂಸದರು, ಶಾಸಕರ ಮತದ ಬಲದಿಂದ ಬಿಜೆಪಿಯ ಅನಿಲ್ ಕುಮಾರ್ 13 ಮತಗಳನ್ನು ಪಡೆದು ಅಧ್ಯಕ್ಷರಾಗಿ ಆಯ್ಕೆಯಾದರೆ, ಕಾಂಗ್ರೆಸ್ ಪಕ್ಷದ ಶಾಬು 11 ಮತ ಪಡೆದರು. ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿರುವ ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ಸೂಕ್ತ ಅಭ್ಯರ್ಥಿ ಇಲ್ಲದ ಕಾರಣ ಕಾಂಗ್ರೆಸ್ ನ ಮಾಲಿನಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

60 ತಿಂಗಳ ಎರಡನೇ ಅವಧಿಗೆ 2018 ರಲ್ಲಿ ಅಧ್ಯಕ್ಷರ, ಉಪಾಧ್ಯಕ್ಷರ ಆಯ್ಕೆಯಾಗಬೇಕಿತ್ತು. ಆದರೆ, ರಾಜ್ಯದ ಚುನಾವಣೆ ನಡೆದ ಇತರ ಪುರಸಭೆಗಳ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲು ವಿವಾದ ನ್ಯಾಯಾಲಯದ ಮೆಟ್ಟಿಲೇರಿದ ಪರಿಣಾಮ ಕಾಪು ಪುರಸಭೆಯ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಮೂರು ಬಾರಿ ತೊಡಕು ಉಂಟಾಗಿತ್ತು.ಇದೀಗ ಅಧ್ಯಕ್ಷ , ಉಪಾಧ್ಯಕ್ಷರು ಆಯ್ಕೆಯಾದರೂ ಇನ್ನು ಕೇವಲ 7 ತಿಂಗಳಷ್ಟೇ ಅಧಿಕಾರ ಲಭ್ಯವಿದೆ.

ಗೈರಾದ ಕಾಂಗ್ರೆಸ್ ಸದಸ್ಯ: ಕಾಂಗ್ರೆಸ್ ನ 12 ಸದಸ್ಯರಲ್ಲಿ ಸುರೇಶ್ ದೇವಾಡಿಗ ಚುನಾವಣೆಗೆ ಗೈರಾಗಿರುವುದು ಅಚ್ಚರಿಗೆ ಕಾರಣವಾಗಿದೆ. ಮಂಗಳವಾರ ಸಂಜೆವರೆಗೆ ಪಕ್ಷದವರೊಂದಿಗೆ ಸಂಪರ್ಕದಲ್ಲಿದ್ದು,ಅವರು ಬುಧವಾರ ಏಕಾಏಕಿ ಯಾರ ಸಂಪರ್ಕಕ್ಕೆ ಸಿಗದೆ ಗೈರಾಗಿರುವುದು ಕಾಂಗ್ರೆಸ್ಸಿಗರಲ್ಲಿ ಚರ್ಚೆಗೆ ಕಾರಣವಾಗಿದೆ.

Edited By : Manjunath H D
Kshetra Samachara

Kshetra Samachara

28/10/2020 04:36 pm

Cinque Terre

16.7 K

Cinque Terre

0

ಸಂಬಂಧಿತ ಸುದ್ದಿ