ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ದೆಹಲಿ ಸಂತ ಸಮಾವೇಶದಲ್ಲಿ ಭಾಗಿಯಾಗಿ ರಾಮ ಮಂದಿರ ನಿರ್ಮಾಣ ಕುರಿತು ಚರ್ಚಿಸುವೆ; ಪೇಜಾವರ ಶ್ರೀ

ಉಡುಪಿ: ಶ್ರೀರಾಮ ಮಂದಿರ ನಿರ್ಮಾಣ ಕಾರ್ಯ ಚಟುವಟಿಕೆ ಕುರಿತು ನವೆಂಬರ್ 10 ರಂದು ದೆಹಲಿಯಲ್ಲಿ ಸಂತ ಸಮಾವೇಶ ನಡೆಯಲಿದೆ. ರಾಮ ಮಂದಿರಕ್ಕೆ ಶಿಲಾನ್ಯಾಸ ನಡೆದಿದ್ದು, ಮುಂದಿನ ಕೆಲಸಗಳ ಬಗ್ಗೆ ಸಮಾವೇಶದಲ್ಲಿ ಅಭಿಪ್ರಾಯ ಮಂಡಿಸಿ, ಚರ್ಚಿಸಲಿದ್ದೇವೆ ಎಂದು ಉಡುಪಿ ಪೇಜಾವರ ಮಠಾಧೀಶ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ.

ಉಡುಪಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ವಿಶ್ವ ಹಿಂದೂ ಪರಿಷತ್ತು ದೆಹಲಿಯಲ್ಲಿ ಸಂತ ಸಮಾವೇಶ ಆಯೋಜಿಸಿದ್ದು, ಇದರಲ್ಲಿ ಪಾಲ್ಗೊಳ್ಳುವುದಾಗಿ ಹೇಳಿದ್ದಾರೆ.

ದೇಶದ ಪ್ರಸಿದ್ಧ ಯಾತ್ರಾ ಸ್ಥಳಗಳಲ್ಲಿ ಪೇಜಾವರ ಮಠದ ಶಾಖೆಗಳಿದ್ದು, ಕರ್ನಾಟಕದಿಂದ ಅಯೋಧ್ಯೆ, ಹರಿದ್ವಾರ-ಬದರೀನಾಥ, ದೆಹಲಿ ಮುಂತಾದ ಕಡೆ ತೆರಳುವ ಧಾರ್ಮಿಕ ಪ್ರವಾಸಿಗರಿಗೆ ಅಲ್ಲಿ ಉಳಿದುಕೊಳ್ಳುವ ವ್ಯವಸ್ಥೆ ಹಿಂದಿನಿಂದಲೂ ಮಾಡುತ್ತಿದ್ದೇವೆ. ಶಾಖಾ ಮಠಗಳ ಮೇಲುಸ್ತುವಾರಿ ನೋಡಲು ಉತ್ತರ ಭಾರತದ ಪ್ರವಾಸ ಮಾಡುತ್ತಿದ್ದೇನೆ ಎಂದು ಪೇಜಾವರ ಸ್ವಾಮೀಜಿ ಇದೇ ಸಂದರ್ಭ ಮಾಹಿತಿ ನೀಡಿದರು.

ತಮ್ಮ ಗುರುಗಳಾದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರು ವೃಂದಾವನಸ್ಥರಾದ ನಂತರ ಉತ್ತರ ಭಾರತದ ಮಠಗಳಿಗೆ, ಕ್ಷೇತ್ರಗಳಿಗೆ ಭೇಟಿ ನೀಡಲು ಸಾಧ್ಯವಾಗಿರಲಿಲ್ಲ. ವಿಜಯ ದಶಮಿ ನಂತರ ಅಲ್ಲೆಲ್ಲ ಪ್ರವಾಸ ಮಾಡುವುದರ ಜೊತೆಗೆ ಸಮಾವೇಶದಲ್ಲಿ ಭಾಗಿಯಾಗುವುದಾಗಿ ಹೇಳಿದರು.

Edited By : Nagesh Gaonkar
Kshetra Samachara

Kshetra Samachara

25/10/2020 04:25 pm

Cinque Terre

17.9 K

Cinque Terre

0

ಸಂಬಂಧಿತ ಸುದ್ದಿ