ಕುಂದಾಪುರ: ಉಡುಪಿ ಜಿಲ್ಲೆಯ ಅಂಪಾರನಲ್ಲಿ ನಡೆದ ಸರಣಿ ಸತ್ಯಾಗ್ರಹದಲ್ಲಿ ಕಾಂಗ್ರೆಸ್ ನ ಯುವನಾಯಕ ವಿಕಾಸ್ ಕುಮಾರ್ ಹೆಗಡೆ ಶಾಸಕ ಸುಕುಮಾರ್ ಶೆಟ್ಟಿ ಅವರ ವಿರುದ್ಧ ಹರಿಹಾಯ್ದಿದ್ದಾರೆ.
ಶಾಸಕರು ತಮ್ಮ ಅಕ್ಕಪಕ್ಕದವರಿಗೆ ಖುಷಿಯಾಗಬೇಕು ಅನ್ನುವ ನಿಟ್ಟಿನಲ್ಲಿ ಹೊಲಿಗೆ ಸಾವಲಂಬಿ ಮಹಿಳೆಯರನ್ನು ತೆರವುಗೊಳಿಸಿದ್ದಾರೆ.
ಇದರಿಂದ ಅವರಿಗೆ ಲಾಭಕ್ಕಿಂತ ನಷ್ಟವೇ ಹೆಚ್ಚು ಎಂದು ಗೊತ್ತಿದ್ದರೂ ಕೂಡ ರಾಜಕೀಯ ದುರುದ್ದೇಶದಿಂದ ಕಾಂಗ್ರೆಸ್ನ ಹತ್ತಿಕ್ಕಬೇಕು ಎನ್ನುವ ದೂರಾಲೋಚನೆಯಿಂದ ಈ ಕೆಲಸ ಮಾಡಿದ್ದಾರೆ , ನಮ್ಮ ಹೋರಾಟ ನಿರಂತರ ಇರುತ್ತದೆ ಮಹಿಳೆಯರಿಗೆ ನ್ಯಾಯ ಕೊಡಿಸುವ ತನಕ ನಮ್ಮ ಹೋರಾಟ ನಿಲ್ಲೋದಿಲ್ಲ ಎಂದು ವಿಕಾಸ್ ಕುಮಾರ್ ಹೆಗಡೆ ಗುಡುಗಿದ್ದಾರೆ.
Kshetra Samachara
24/10/2020 07:47 pm