ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಹುಟ್ಟುಹಬ್ಬ ಪ್ರಯುಕ್ತ ರಕ್ತದಾನ ಶಿಬಿರ

ಮಣಿಪಾಲ: ಪ್ರಮೋದ್ ಮಧ್ವರಾಜ್ ಅಭಿಮಾನಿ ಬಳಗ ಉಡುಪಿ ಜಿಲ್ಲೆ ಇಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿತು.

ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಹುಟ್ಟುಹಬ್ಬದ ಪ್ರಯುಕ್ತ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು‌.ಈ ಸಂದರ್ಭ ಹತ್ತಾರು ಯುವಕರು ಮುಂದೆ ಬಂದು ರಕ್ತದಾನದಲ್ಲಿ ಪಾಲ್ಗೊಂಡರು.

ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಪ್ರಮೋದ್ ಮಧ್ವರಾಜ್ ,ನೂರಕ್ಕೆ ನೂರು ಪುಣ್ಯ ಫಲ ಸಿಗಬೇಕಾದರೆ ರಕ್ತದಾನ ಮಾಡಿ.ದಾನ ಕೊಟ್ಟವರಿಗೂ, ದಾನ ಪಡೆದವರಿಗೂ ಗೊತ್ತಿಲ್ಲದ ಏಕೈಕ ದಾನ 'ರಕ್ತದಾನ'. ದಾನ ಧರ್ಮ ಮಾಡಿದ್ದು ಪ್ರಚಾರ ಮಾಡಬಾರದು. ರಕ್ತದಾನ ಮಾಡಿದವರಿಗೆ ಪುಣ್ಯಫಲ ಜಾಸ್ತಿಯಾಗುತ್ತದೆ.

ದನದ ಕೆಚ್ಚಲಿನಲ್ಲಿರುವ ಹಾಲು ಎಲ್ಲರಿಗೂ ಸಿಗುತ್ತದೆ,ಆದರೆ ನಾಯಿಯ ಮೊಲೆಯಲ್ಲಿರುವ ಹಾಲು ನಾಯಿಮರಿಗಳಿಗೆ ಮಾತ್ರ ಸೀಮಿತ.ಹೀಗಾಗಿ ನಾವು ಪರೋಪಕಾರದಂತಿರುವ ದನದ ಕೆಚ್ಚಲಿನಂತಾಗೋಣ ಎಂದು ಹೇಳಿದರು.

Edited By : Manjunath H D
Kshetra Samachara

Kshetra Samachara

17/10/2020 09:39 pm

Cinque Terre

8.16 K

Cinque Terre

0

ಸಂಬಂಧಿತ ಸುದ್ದಿ