ಮೂಲ್ಕಿ: ಮುಲ್ಕಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮುಲ್ಕಿ ಆರೋಗ್ಯ ಕೇಂದ್ರ ಸಹಿತ 5 ಪ್ರಾ. ಆ. ಕೇಂದ್ರಗಳಿಗೆ ಕೇಡ್ ಸಂಸ್ಥೆ ವತಿಯಿಂದ ಉಚಿತವಾಗಿ ಒದಗಿಸಲಾದ ಇಸಿಜಿ ಯಂತ್ರಗಳನ್ನು ಶಾಸಕ ಉಮಾನಾಥ ಕೋಟ್ಯಾನ್ ವಿತರಿಸಿದರು.
ಬಳಿಕ ಅವರು ಮಾತನಾಡಿ, ಕೆಲವೇ ದಿನಗಳಲ್ಲಿ ಮುಲ್ಕಿ ಪೂರ್ಣ ಪ್ರಮಾಣದ ತಾಲೂಕಾಗಿ ಘೋಷಣೆಯಾಗಲಿದ್ದು, ಬಳಿಕ ತಾಲೂಕಿಗೆ ಬೇಕಾದ ಎಲ್ಲಾ ವ್ಯವಸ್ಥೆ ಶೀಘ್ರ ಪೂರೈಸಲು ಕ್ರಮಕೈಗೊಳ್ಳಲಾಗುವುದು. ಮುಲ್ಕಿ ಸಮುದಾಯ ಆ. ಕೇಂದ್ರ ತಾಲೂಕು ಆಸ್ಪತ್ರೆಯಾಗಿ ಮೇಲ್ದರ್ಜೆ ಗೇರಲಿದೆ ಎಂದರು.
ಕೇಡ್ ಈಗಾಗಲೇ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ 222 ಆರೋಗ್ಯ ಕೇಂದ್ರಗಳಿಗೆ ಉಚಿತವಾಗಿ ಇಸಿಜಿ ಯಂತ್ರ ವಿತರಿಸಿದೆ. ಅದೇ ರೀತಿ ಮುಲ್ಕಿ ಮೂಡುಬಿದಿರೆ ವ್ಯಾಪ್ತಿಯ ಆ. ಕೇಂದ್ರಗಳಲ್ಲಿ ಇಸಿಜಿ ಯಂತ್ರ ಇಲ್ಲದ ಕಡೆ ಇಸಿಜಿ ಯಂತ್ರ ಪೂರೈಸಲು ಮನವಿ ಮಾಡಲಾಗಿದ್ದು, ಕೇಡ್ ಅವಶ್ಯವಿದ್ದೆಡೆ ಪೂರೈಸಿದೆ ಎಂದರು.
ಈ ಸಂದರ್ಭ ಮುಲ್ಕಿ ಆರೋಗ್ಯ ಕೇಂದ್ರ, ಬೋಂದೆಲ್, ಕಲ್ಲಮುಂಡ್ಕೂರು, ಕಟೀಲು ಮತ್ತು ಪಾಲಡ್ಕ ಪ್ರಾ. ಆ. ಕೇಂದ್ರಗಳಿಗೆ ಉಚಿತ ಇಸಿಜಿ ಯಂತ್ರ ವಿತರಿಸಲಾಯಿತು.
ಜಿಪಂ ಉಪಾಧ್ಯಕ್ಷೆ ಕಸ್ತೂರಿ ಪಂಜ, ಸದಸ್ಯ ವಿನೋದ್ ಕುಮಾರ್ ಬೊಳ್ಳೂರು, ತಾಪಂ ಸದಸ್ಯ ಶರತ್ ಕುಬೆವೂರು,ಮುಲ್ಕಿ ನಪಂ ಸದಸ್ಯರಾದ ಸತೀಶ್ ಅಂಚನ್,ರಾಧಿಕಾ ಕೋಟ್ಯಾನ್,ಸುಭಾಸ್ ಶೆಟ್ಟಿ, ದಯಾವತಿ ಅಂಚನ್, ಶೈಲೇಶ್ ಕುಮಾರ್,ಬಿಜೆಪಿ ಮುಖಂಡರಾದ ರಮಾನಾಥ ಪೈ,ವಿಠಲ್ ಎನ್.ಎಮ್., ಕೇಡ್ ಸಂಸ್ಥೆಯ ಪ್ರದೀಪ್, ವಿವಿಧ ಪ್ರಾ. ಆ. ಕೇಂದ್ರಗಳ ವೈದ್ಯಾಧಿಕಾರಿಗಳಾದ ಡಾ.ತ್ರಿವೇಣಿ ಕಲ್ಲಮುಂಡ್ಕೂರು, ಡಾ.ಭಾಸ್ಕರ ಕೋಟ್ಯಾನ್ ಕಟೀಲು, ಡಾ.ಸವಿತಾ ಬೋಂದೆಲ್, ಡಾ.ಮನಿಷಾ ಸೀಕ್ವೆರಾ ಪಾಲಡ್ಕ,ಮುಲ್ಕಿ ಸಮುದಾಯ ಆ. ಕೇಂದ್ರ ವೈದ್ಯಾಧಿಕಾರಿ ಡಾ.ಕೃಷ್ಣ ಉಪಸ್ಥಿತರಿದ್ದರು.
Kshetra Samachara
16/10/2020 06:44 pm