ಮಂಗಳೂರು: ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಮಂಗಳೂರಿಗೆ ಬಂದ್ರೆ ಮಸಿ ಬಳಿಯುತ್ತೇವೆ ಎಂದು ಹೇಳಿಕೆ ನೀಡಿದ್ದ ದಕ್ಷಿಣ ಕನ್ನಡ ಜಿಲ್ಲಾ ಯೂತ್ ಕಾಂಗ್ರೆಸ್ ಅಧ್ಯಕ್ಷ ಹಾಗೂ ಡಿಕೆಶಿ ಆಪ್ತ ಮಿಥುನ್ ರೈ ವಿರುದ್ಧ ಹಿಂದೂ ಪರ ಸಂಘಟನೆಯ ಕಾರ್ಯಕರ್ತರು ದೂರು ನೀಡಿದ್ದರು. ಇದನ್ನು ಖಂಡಿಸಿ ಪ್ರತಿಕ್ರಿಯೆ ನೀಡಿದ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಯೋಗಿ ಆದಿತ್ಯನಾಥ್, ಮಿಥುನ್ ರೈ ರಾಜಕಾರಣಿಗಳು. ಯೋಗಿಯವರನ್ನು ಈಗ ನಾವು ಸ್ವಾಮೀಜಿ ಎಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಮಿಥುನ್ ರೈಗೆ ಓರ್ವ ಮುಖ್ಯಮಂತ್ರಿಯನ್ನು ಟೀಕಿಸುವ ಹಕ್ಕಿಲ್ವೇ? ಎಂದು ಪ್ರಶ್ನಿಸಿದ ಅವ್ರು, ಮಿಥುನ್ ರೈ ಬಿಜೆಪಿಯವರಿಂದ ಹಿಂದುತ್ವ ಕಲಿಯಬೇಕೇ ಎಂದು ಪ್ರಶ್ನೆ ಮಾಡಿದರು.
ಬಿಜೆಪಿಯವರು ಮಿಥುನ್ ರೈಯಿಂದ ಹಿಂದುತ್ವ ಕಲಿಯಲಿ ಎಂದು ಸವಾಲೆಸದ ಅವರು, ಬಿಜೆಪಿಯವರು ಮಿಥುನ್ ರೈಯಿಂದ ಹಿಂದುತ್ವ, ಸಾಮಾಜಿಕ ನ್ಯಾಯ, ಎಲ್ಲಾ ಧರ್ಮೀಯರನ್ನು ಹೇಗೆ ಪ್ರೀತಿಸಬೇಕು ಎಂಬುದನ್ನು ನೋಡಿ ಕಲಿಯಲಿ. ಅದಕ್ಕೆ ನಿಮಗೆ ಅವ್ರ ಮೇಲೆ ದ್ವೇಷನಾ? ದ್ವೇಷ ರಾಜಕಾರಣ ಒಳ್ಳೆಯದಲ್ಲ ಎಂದ ಅವ್ರು, ಟೀಕೆಗಳನ್ನು ಎದುರಿಸುವ ಶಕ್ತಿ ಬೇಕೆಂದು ಟಾಂಗ್ ನೀಡಿದರು.
Kshetra Samachara
15/10/2020 01:49 pm