ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮರಳುಗಾರಿಕೆ ಆರಂಭಿಸಿ; ಇಲ್ಲದಿದ್ರೆ ಉಗ್ರ ಹೋರಾಟ: ಇಂಟಕ್ ಯುವ ಘಟಕ ರಾಜ್ಯಾಧ್ಯಕ್ಷ ಎಚ್ಚರಿಕೆ

ಮಂಗಳೂರು: ದ.ಕ. ಜಿಲ್ಲೆಯಲ್ಲಿ ಕಳೆದೊಂದು ವರ್ಷದಿಂದ ಮರಳಿನ ಸಮಸ್ಯೆ ಇದೆ. ಹೀಗಾಗಿ ಕಟ್ಟಡ ಕಾರ್ಮಿಕರ ಜೀವನ ಅತಂತ್ರವಾಗಿದೆ.

ತಕ್ಷಣ ಮರಳುಗಾರಿಕೆ ಆರಂಭಿಸದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಮಂಗಳೂರಲ್ಲಿ ಇಂಟಕ್ ಯುವ ಘಟಕ ರಾಜ್ಯಾಧ್ಯಕ್ಷ ವರುಣ್ ಕುಮಾರ್ ಎಸ್ .ಕೆ. ಎಚ್ಚರಿಕೆ ನೀಡಿದ್ದಾರೆ. ಮಲ್ಲಿಕಟ್ಟೆಯಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಮಾರು 6 ಸಾವಿರ ರೂ.ನ ಮರಳನ್ನು 20,000 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ ಎಂದು ಅರೋಪಿಸಿದರು. ಇದರಿಂದಾಗಿ ಬಡವರು ಮನೆ ಕಟ್ಟಲಾಗದೆ ಸಮಸ್ಯೆ ಎದುರಿಸುತ್ತಿದ್ದಾರೆ. ಮರಳಿನ ಅಭಾವದಿಂದ ಮರಳು ಸಾಗಾಟಗಾರರು, ಕಾರ್ಮಿಕರು ಮಾತ್ರವಲ್ಲ, ಇಂಜಿನಿಯರ್ ಗಳು, ಬಿಲ್ಡರ್ ಗಳು ಹಾಗೂ ಕಟ್ಟಡ ಕಾಮಗಾರಿ ಅವಲಂಬಿಸಿರುವ ಇತರ ಕ್ಷೇತ್ರದ ಮಂದಿ ಸಂಕಷ್ಟ ಎದುರಿಸುವಂತಾಗಿದೆ ಎಂದರು.

ಅ. 14 ರಂದು ಬಿಲ್ಡರ್ ಅಸೋಸಿಯೇಷನ್ ಸೇರಿದಂತೆ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದ ಗುತ್ತಿಗೆದಾರರ ಅಸೋಸಿಯೇಶನ್ ನಡೆಸಲು ಉದ್ದೇಶಿಸಿರುವ ಹೋರಾಟಕ್ಕೆ ಇಂಟಕ್ ಸಂಪೂರ್ಣ ಬೆಂಬಲ ನೀಡುತ್ತಿರುವುದಾಗಿ ಇದೇ ವೇಳೆ ಅವರು ಘೋಷಿಸಿದರು.

Edited By : Nagesh Gaonkar
Kshetra Samachara

Kshetra Samachara

13/10/2020 05:28 pm

Cinque Terre

36.7 K

Cinque Terre

10